ಕ್ರಿಕೆಟ್

ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ನಿರಾಕರಿಸಿದ ವಿಂಡೀಸ್ ತಂಡ

Shilpa D

ಕರಾಚಿ: ಯುಎಇನಲ್ಲಿ ಆಡಲಿರುವ ಪೂರ್ಣ ಸರಣಿಯ ಪೈಕಿ ಕೆಲವು ಪಂದ್ಯಗಳನ್ನಾದರೂ ಪಾಕಿಸ್ತಾನದಲ್ಲಿ ಆಡಿ ಎಂದು ಪಿಸಿಬಿಯ ಮನವಿಯನ್ನು ವೆಸ್ಟ್ ಇಂಡೀಸ್ ತಿರಸ್ಕರಿಸಿದೆ.

ಪಾಕಿಸ್ತಾನದಲ್ಲಿ ಭದ್ರತಾ ಸ್ಥಿತಿ ಕಾಲಕ್ರಮೇಣ ಸುಧಾರಿಸುತ್ತಿದ್ದು, ನೀವು ಕೆಲವು ಪಂದ್ಯಗಳನ್ನಾದರೂ ಪಾಕಿಸ್ತಾನದಲ್ಲಿ ಆಡಬೇಕು ಎಂದು ನಾವು ಮನವಿ ಮಾಡಿದ್ದೆವು. ಆದರೆ ಯಾವುದೇ ಮನವೊಲಿಕೆಗೂ ಅವರು ಮಣಿಯಲಿಲ್ಲ. ಇದು ನಿಜವಾಗಲೂ ನಿರಾಶಾದಾಯಕ ಎಂದು ಪಿಸಿಬಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶ್ರೀಲಂಕಾ ಆಟಗಾರರ ಮೇಲೆ ಉಗ್ರಗಾಮಿಗಳ ದಾಳಿ ನಡೆದಾಗಿನಿಂದ ಯಾವ ರಾಷ್ಟ್ರವೂ ಪಾಕಿಸ್ತಾನದಲ್ಲಿ ಪಂದ್ಯವಾಡಲು ಒಪ್ಪುತ್ತಿಲ್ಲ. ಪಿಸಿಬಿ ಜಿಂಬಾಬ್ವೆ ಕ್ರಿಕೆಟ್ ಮಂಡಳಿಗೆ ಆಮಿಷ ಒಡ್ಡಿ ಜಿಂಬಾಬ್ವೆ ಜತೆ ಪಾಕ್ ನೆಲದಲ್ಲಿ ಪಂದ್ಯಗಳನ್ನು ಆಡಿದ್ದು ಬಿಟ್ಟರೆ ಯಾವ ದೇಶವೂ ಕ್ರಿಕೆಟ್ ಆಡಲು ಒಪ್ಪಿಲ್ಲ.

ಪಾಕಿಸ್ತಾನದಲ್ಲಿ ಆಡಲು ಈಗಲೂ ತಮ್ಮ ಆಟಗಾರರಿಗೆ ಭದ್ರತೆಯ ಭಯವಿದೆ ಎಂದು ವೆಸ್ಟ್ ಇಂಡೀಸ್ ಮಂಡಳಿ ತಿಳಿಸಿದ್ದಾಗಿ ಅಧಿಕಾರಿ ಹೇಳಿದರು. ಪಾಕಿಸ್ತಾನವು ವೆಸ್ಟ್ ಇಂಡೀಸ್ ವಿರುದ್ಧ  ಟ್ವೆಂಟಿ 20 ಅಂತಾರಾಷ್ಟ್ರೀಯ ಎರಡು ಟೆಸ್ಟ್ ಪಂದ್ಯಗಳು, ಐದು ಏಕ ದಿನ ಪಂದ್ಯಗಳು ಮತ್ತು ಎರಡು ಪಂದ್ಯಗಳನ್ನು ಆಯೋಜಿಸಿದೆ

SCROLL FOR NEXT