ಕೋಲ್ಕತ: ಅಭ್ಯಾಸದ ವೇಳೆ ಕಾಲಿಗೆ ಗಾಯ ಮಾಡಿಕೊಂಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿ ಜಾನ್ ಹೇಸ್ಟಿಂಗ್ಸ್ ಐಪಿಎಲ್ ಟೂರ್ನಿಯಿಂದ ಔಟ್ ಆಗಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ಪರ 2 ಪಂದ್ಯ ಆಡಿದ್ದ ಹೇಸ್ಟಿಂಗ್ಸ್ ಗೆ ಅಭ್ಯಾಸದ ವೇಳೆ ಕಾಲಿಗೆ ಗಾಯವಾಗಿದ್ದರಿಂದ ತವರಿಗೆ ಮರಳಿದ್ದಾರೆ. ಕೆಕೆಆರ್ ತಂಡದ ಸಹಾಯಕ ಕೋಚ್ ಸೈಮನ್ ಕಾಟಿಚ್ ಈ ವಿಷಯವನ್ನು ಪ್ರಕಟಿಸಿದ್ದಾರೆ.
30 ವರ್ಷದ ಹೇಸ್ಟಿಂಗ್ಸ್ ಆಸೀಸ್ ತಂಡದ ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಲಭ್ಯರಾಗುವುದು ಅನುಮಾನವೆನಿಸಿದೆ.