ಬ್ಯಾಟಿಂಗ್ ಮಾಡುತ್ತಿರುವ ವಿರಾಟ್ ಕೊಹ್ಲಿ 
ಕ್ರಿಕೆಟ್

ರಾಯಲ್ ಚಾಲೆಂಜರ್ಸ್ ಅಬ್ಬರದ ಮುಂದೆ ಮಂಕಾದ ರೈಸಿಂಗ್ ಪುಣೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಎ.ಬಿ. ಡಿವಿಲಿಯರ್ಸ್ ನ ಹೊಡೆ ಬಡಿ ಬ್ಯಾಟಿಂಗ್‌ ನೆರವಿನಿಂದ ರಾಯಲ್ ಚಾಲೆಂಜರ್ಸ್ ...

ಪುಣೆ: ರಾಯಲ್  ಚಾಲೆಂಜರ್ಸ್  ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ  ಮತ್ತು ಎ.ಬಿ. ಡಿವಿಲಿಯರ್ಸ್ ನ ಹೊಡೆ ಬಡಿ ಬ್ಯಾಟಿಂಗ್‌ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶುಕ್ರವಾರ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್  ವಿರುದ್ಧ ಗೆಲವು ಸಾಧಿಸಿದೆ.
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ  ಪಂದ್ಯದಲ್ಲಿ ಆರ್‌ಸಿಬಿ ತಂಡವು ರೈಸಿಂಗ್ ಪುಣೆ ಸೂಪರ್‌ ಜೈಂಟ್ಸ್ ತಂಡವನ್ನು 13 ರನ್‌ಗಳಿಂದ ಸೋಲಿಸಿತು.
ಟಾಸ್ ಗೆದ್ದು ಮಹೇಂದ್ರಸಿಂಗ್ ಧೋನಿ ನಾಯಕತ್ವದ  ರೈಸಿಂಗ್ ಪುಣೆ ಸೂಪರ್‌ ಜೈಂಟ್ಸ್  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.  ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡವು   ವಿರಾಟ್‌ ಕೊಹ್ಲಿ (80 , 63ಎಸೆತ ) ಮತ್ತು ಎ.ಬಿ. ಡಿವಿಲಿಯರ್ಸ್ (83, 46ಎಸೆತ) ಅವರ ಎರಡನೇ ವಿಕೆಟ್‌ ಜೊತೆಯಾಟದಿಂದಾಗಿ  20 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದು ಕೊಂಡು 185 ರನ್‌ಗಳ ಮೊತ್ತ ಗಳಿಸಿತು. 
 ಮೊದಲು ಬ್ಯಾಟಿಂಗ್  ಆರಂಭಿಸಿದ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಕೇವಲ 7 ರನ್ ಗಳಿಸಿ ಔಟಾದರು. ನಂತರ ಕೊಹ್ಲಿ ಜೊತೆಗೂಡಿದ ಎಬಿಡಿ ತಮ್ಮ ಹೊಡೆ ಬಡಿ ಆಟವನ್ನು  ಆರಂಭಿಸಿದರು. ಇವರ ಆಟಕ್ಕೆ ಬ್ರೇಕ್ ತರಲು ಪುಣೆ ನಾಯಕ ಧೋನಿ ಪದೇ ಪದೇ ಬೌಲರ್‌ಗಳನ್ನು ಬದಲಿಸಿ ಕಣಕ್ಕಿಳಿಸಿದರೂ ನಿರೀಕ್ಷಿತ ಫಲ ಕಾಣುವಲ್ಲಿ ವಿಫಲರಾದರು. 
ಡಿವಿಲಿಯರ್ಸ್ ಕೇವಲ 25 ಎಸೆತಗಳಲ್ಲಿ 50 ರನ್ ಗಳಿಸಿದರೆ ಸಮಯೋಜಿತ ಆಟ ಪ್ರದರ್ಶಿಸಿದ ಕೊಹ್ಲಿ  47 ಎಸೆತಗಳ ಅರ್ಧಶತಕ ಪೂರೈಸಿದರು. ಅರ್ಧ ಶತಕದ ನಂತರ ಬಿರುಸಿನ ಆಟ ಪ್ರಾರಂಭಿಸಿದ ಇವರು ಎರಡನೇ ವಿಕೆಟ್ ಜೊತೆಯಾಟದಲ್ಲಿ  158 ರನ್‌ ಪೇರಿಸಿದರು. ತಿಸಾರ ಪೆರೆರಾ ಬೌಲಿಂಗ್ ಮಾಡಿದ 20ನೇ ಓವರ್‌ನಲ್ಲಿ  ಇಬ್ಬರೂ ಔಟಾದರು.
ಬೌಲಿಂಗ್ ನಲ್ಲಿ ಸ್ಟುವರ್ಟ್‌ ಬಿನ್ನಿ ಮತ್ತು ಹರ್ಷಲ್ ಪಟೇಲ್ ಹೆಚ್ಚು ರನ್ ನೀಡಿದರು. ಅದೇ ವೇಳೆ ಬಲಗೈ ವೇಗಿ ಕೇನ್ ರಿಚರ್ಡ್‌ಸನ್ (3–0–13–3) ಪ್ರಮುಖ ಹಂತಗಳಲ್ಲಿ ವಿಕೆಟ್‌ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಮಧ್ಯಮ ವೇಗಿ ಶೇನ್ ವ್ಯಾಟ್ಸನ್ ಕೂಡ (31ಕ್ಕೆ2) ಉತ್ತಮ ಬೌಲಿಂಗ್ ಮಾಡಿದರು. 
ರಾಯಲ್ ಚಾಲೆಂಜರ್ಸ್ ನ 185 ರನ್ಗಳ ಗುರಿ ಬೆನ್ನತ್ತಿ ಬ್ಯಾಟಿಂಗ್ ಇಳಿದ ಪುಣೆ ತಂಡದಲ್ಲಿ  ಅಜಿಂಕ್ಯ ರಹಾನೆ (60) ಮತ್ತು ಮಹೇಂದ್ರಸಿಂಗ್ ಧೋನಿ (41) ರನ್ ಗಳಿಸಿದ್ದರೂ ಆರ್ಸಿಬಿ ಬೌಲರ್ ಗಳ ದಾಳಿಯಲ್ಲಿ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 172 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.
 ಆರಂಭಿಕ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಕ್ರೀಸ್‌ನಲ್ಲಿ ಇರು ವವರೆಗೂ ಪುಣೆ ತಂಡದ ಗೆಲುವಿನ ನಿರೀಕ್ಷೆ ಇತ್ತು.  ಎರಡನೇ ಓವರ್‌ ನಲ್ಲಿಯೇ  ಪ್ಲೆಸಿ ಅವರು ಔಟಾದರು. ನಂತರ ಗಾಯಗೊಂಡ  ಪೀಟರ್ಸನ್‌  ವಿಶ್ರಾಂತಿಗಾಗಿ ಮರಳಿದರು. ನಂತರ ಬಂದ ಸ್ಟೀವ್ ಸ್ಮಿತ್‌ ಅವರು ಕೊಹ್ಲಿ ಚುರುಕಿನ ಫೀಲ್ಡಿಂಗ್ ಮತ್ತು ನಿಖರ ಥ್ರೋಗೆ ರನ್‌ಔಟ್ ಆದರು. ಅಜಿಂಕ್ಯ ಜೊತೆಗೂಡಿದ ಧೋನಿ ಮೂರನೇ ವಿಕೆಟ್‌ಗೆ 91 ರನ್‌ಗಳನ್ನು ಸೇರಿಸಿದ್ದು, ಪುಣೆಗೆ ಚೇತರಿಕೆಯನ್ನು ನೀಡಿದಂತಾಯಿತು. ಇವರಿಬ್ಬರ ಜತೆಯಾಟದಿಂದ ತಂಡವು 14.4 ಓವರ್‌ಗಳಲ್ಲಿ 109 ರನ್ ಗಳಿಸಿತ್ತು. ಸ್ಯಾಮುಯೆಲ್ ಬದ್ರಿ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ  ತಬ್ರೇಜ್ ಶಮ್ಸಿ ಅವರ ಎಸೆತದಲ್ಲಿ ವಿಕೆಟ್‌ಕೀಪರ್‌ ರಾಹುಲ್‌ಗೆ ಕ್ಯಾಚಿತ್ತ ರಹಾನೆ ನಿರ್ಗಮಿಸಿದರು. ನಂತರದ ಓವರ್‌ನಲ್ಲಿ ಧೋನಿ ಕೂಡ ಪೆವಿಲಿಯನ್ಗೆ ಮರಳಿದರು. 
ತಿಸಾರ ಪೆರೆರಾ (34 ರನ್) ಮತ್ತು ರಜತ್ ಭಾಟಿಯಾ (21 ರನ್) ಅವರ ತಮ್ಮಿಂದಾದ ಪ್ರಯತ್ನವನ್ನು ಮಾಡಿದರೂ ಉಳಿದ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನ ಪುಣೆ ತಂಡದ ಪರಾಭವಕ್ಕೆ ಹೇತುವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಮೇಲೆ ಹರಿದ ಟ್ರಕ್; 23 ಕುರಿ, 2 ಮೇಕೆ ಸಾವು, ಭೀಕರ ವಿಡಿಯೋ ಸಿಸಿಟಿವಿಯಲ್ಲಿ ಸೆರೆ!

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ