ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯ ಪಂದ್ಯಗಳಿಗೆ ಅಭಿಮಾನಿಗಳು ಕ್ರೀಡಾಂಗಣಕ್ಕೆ 'ಬರ'ದಿದ್ದರಿಂದ ಚಿನ್ನಸ್ವಾಮಿಯಲ್ಲಿ ನಡೆಯುವ ಪಂದ್ಯಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಟಿಕೆಟ್ ದರಗಳನ್ನು ಕಡಿಮೆಗೊಳಿಸುವ ನಿರ್ಧಾರ ಕೈಗೊಂಡಿದೆ.
ಆರ್ಸಿಬಿ ಎರಡು ಪ್ರಮುಖ ಸ್ಟ್ಯಾಂಡ್ ಗಳ ದರವನ್ನು ಕಡಿಮೆಗೊಳಿಸಿದೆ. ಇದರಿಂದಾಗಿ ಮೇ 2ರಂದು ಕೆಕೆಆರ್ ವಿರುದ್ಧದ ಪಂದ್ಯ ಸೇರಿದಂತೆ ಮುಂಬರುವ ಪಂದ್ಯಗಳಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರುತ್ತಾರೆಂದು ನಿರೀಕ್ಷಿಸಲಾಗಿದೆ.
ಇನ್ನು ಡಿ ಕಾರ್ಪೋರೇಟ್ ಟಿಕೆಟ್ ದರವನ್ನು 6 ಸಾವಿರದಿಂದ 2 ಸಾವಿರ ರುಪಾಯಿಗೆ ಇಳಿಸಿದರೆ, ಫ್ಯಾನ್ ಟೆರಸ್ ಎನ್ ಸ್ಟ್ಯಾಂಡ್ ಟಿಕೆಟ್ 7 ಸಾವಿರದಿಂದ 4 ಸಾವಿರಕ್ಕೆ ಆರ್ಸಿಬಿ ಕಡಿತಗೊಳಿಸಿದೆ.