ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ದೌರ್ಬಲ್ಯ ತಿಳಿದಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಆರ್ಸಿಬಿ ತಂಡದ ಬೌಲರ್ ಬೇವರಿಳಿಸಿ ಹೈದರಾಬಾದ್ 15 ರನ್ ಗಳಿಂದ ಜಯ ಗಳಿಸಿಲು ಕಾರಣರಾದರು.
ತಮ್ಮ ಬೌಲಿಂಗ್ ವಿಕ್ನೆಸ್ ಅರಿತಿದ್ದ ವಿರಾಟ್ ಕೊಹ್ಲಿ ಟಾಸ್ ಗೆದ್ದರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರೊಂದಿಗೆ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡದ 194 ರನ್ ಗಳನ್ನು ಕಲೆ ಹಾಕಿತು. 195 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಆರ್ಸಿಬಿ ತಂಡ 15 ರನ್ ಗಳಿಂದ ವಿರೋಚಿತ ಸೋಲು ಕಂಡಿತು.
ಆರ್ಸಿಬಿ ಪರ ವಿರಾಟ್ ಕೊಹ್ಲಿ 14, ಕೆಎಲ್ ರಾಹುಲ್ 51, ಎಡಿಬಿ ವಿಲಿಯರ್ಸ್ 47, ಶೇನ್ ವಾಟ್ಸನ್ 2, ಸಚಿನ್ ಬೇಬಿ 27, ಫರ್ವೇಜ್ ರಸೂಲ್ 10, ಕೆಎಂ ಜಾದವ್ ಅಜೇಯ 25 ರನ್ ಗಳಿಸಿದ್ದಾರೆ.
ಹೈದರಾಬಾದ್ ಪರ ಆಶಿಶ್ ನೆಹ್ರಾ, ಭುವನೇಶ್ವರ್ ಕುಮಾರ್, ರೆಹಮಾನ್, ಬಿಬಿ ಶ್ರಾಣ್ ಹಾಗೂ ಹೆನ್ರಿಕ್ಸ್ ತಲಾ 1 ವಿಕೆಟ್ ಪಡೆದಿದ್ದಾರೆ.
ಹೈದರಾಬಾದ್ ಪರ ಡೇವಿಡ್ ವಾರ್ನರ್ 92, ಶಿಖರ್ ಧವನ್ 11, ವಿಲಿಯಮನ್ಸ್ 50, ನಮನ್ ಓಜಾ 1, ಹೂಡಾ 2, ಹೆನ್ರಿಕ್ಸ್ ಅಜೇಯ 31 ಹಾಗೂ ಆಶಿಶ್ ರೆಡ್ಡಿ 2 ರನ್ ಗಳಿಸಿದ್ದಾರೆ.
ಆರ್ಸಿಬಿ ಪರ ರಿಚರ್ಡ್ ಸನ್ 2, ವಾಟ್ಸನ್ ಹಾಗೂ ಶಮ್ಷಿ ತಲಾ 1 ವಿಕೆಟ್ ಪಡೆದಿದ್ದಾರೆ.