ನವದೆಹಲಿ: ಇಡೀ ದೇಶವೇ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧರಿತ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವ ಮುನ್ನ, ಮೊತ್ತ ಮೊದಲ ಬಾರಿಗೆ ಕ್ರಿಕೆಟಿಗನೊಬ್ಬನ ಜೀವನ ಚರಿತ್ರೆ ಆಧರಿತ ಸಿನಿಮಾ ಬರುತ್ತಿರುವುದು ಇದೇ ಮೊದಲು.
ಎಂ ಎಸ್ ಧೋನಿ- ದಿ ಅನ್ ಪೋಲ್ಡ್ ಸ್ಟೋರಿ ಎಂಬ ಶೀರ್ಷಿಕೆ ಅಡಿಯಲ್ಲಿ ಈ ಚಿತ್ರ ಬರುತ್ತಿದೆ. ತಮ್ಮ ಜೀವನಾಧರಿತ ಚಿತ್ರ ನಿರ್ಮಾಣಕ್ಕೆ, ಚಿತ್ರ ನಿರ್ಮಾಪಕರಿಂದ ಧೋನಿ ಬರೋಬ್ಬರಿ 60 ಕೋಟಿ ಹಣ ಪಡೆದಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ 20 ಕೋಟಿ ಅಡ್ವಾನ್ಸ್ ಪಡೆದಿರುವ ಧೋನಿ ಮುಂದಿನ ದಿನಗಳಲ್ಲಿ ಉಳಿದ ಮೊತ್ತವನ್ನು ಪಡೆಯಲಿದ್ದಾರೆ.