ಕ್ರಿಕೆಟ್

ಕ್ರಿಕೆಟ್ ದಿಗ್ಗಜರಾದ ಜಯವರ್ಧನೆ, ಸಂಗಾಕ್ಕರ ವಿರುದ್ಧ ದಿಲ್ಶಾನ್ ಗರಂ

Vishwanath S

ಕೊಲಂಬೋ: 10 ತಿಂಗಳ ಕಾಲ ಶ್ರೀಲಂಕಾ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದ ವೇಳೆ ಯಾರ ಬೆಂಬಲವೂ ಸಿಕ್ಕಿರಲಿಲ್ಲ ಎಂದು ಮಾಜಿ ನಾಯಕ ತಿಲಕರತ್ನೆ ದಿಲ್ಶಾನ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಭಾನುವಾರ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದ ದಿಲ್ಶಾನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ವೇಳೆ ತನ್ನ ನಾಯಕತ್ವಕ್ಕೆ ಸೂಕ್ತ ಬೆಂಬಲ ಸಿಗದಿದ್ದಕ್ಕೆ ನಾನು ನಾಯಕತ್ವದಿಂದ ಕೆಳಗಿಳಿಯಬೇಕಾಯಿತು ಎಂದು ಹೇಳುವ ಮೂಲಕ ಕ್ರಿಕೆಟ್ ದಿಗ್ಗಜರಾದ ಕುಮಾರ ಸಂಗಾಕ್ಕರ ಹಾಗೂ ಜಯವರ್ಧನೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಲಂಕಾ ತಂಡದ ನಾಯಕನಾಗಬೇಕು ಎಂಬ ಆಸೆ ಇರಲಿಲ್ಲ. ಶ್ರೀಲಂಕಾ ಕ್ರಿಕೆಟ್ ಮಂಡಲಿ ನಾಯಕತ್ವಕ್ಕೆ ಹೊಸ ವ್ಯಕ್ತಿಯನ್ನು ಹುಡುಕುವವರೆಗೆ 6 ತಿಂಗಳ ಕಾಲ ತಂಡವನ್ನು ಮುನ್ನಡೆಸುವಂತೆ ಹೇಳಿತ್ತು. ಹೀಗಾಗಿ 2009-12ರ ಅವಧಿಯಲ್ಲಿ ತಂಡವನ್ನು ಮೂರು ಮಾದರಿಯಲ್ಲಿ ಮುನ್ನಡೆಸಿದೆ.

ನಾನು ತಂಡವನ್ನು ಮುನ್ನಡೆಸಿದಾಗ ಏಂಜೆಲೋ ಮ್ಯಾಥ್ಯೂಸ್ ಗಾಯದಿಂದ ಬೌಲಿಂಗ್ ಮಾಡುತ್ತಿರಲಿಲ್ಲ. ಆದೆರ ಮಹೇಲಾ ಜಯವರ್ಧನೆ ನಾಯಕನಾದ ಬಳಿಕ ಬೌಲಿಂಗ್ ಮಾಡಲಾರಂಭಿಸಿದರು. 2011ರ ವಿಶ್ವಕಪ್ ಬಳಿಕ ಯಾರೂ ನಾಯಕನಾಗಲು ಮುಂದೆ ಬರಲಿಲ್ಲ. ಇಂಗ್ಲೆಂಡ್ ಪ್ರವಾಸದಲ್ಲಿ ನಾನು ಗಾಯಗೊಂಡೆ, ಆಗಲೂ ಯಾರೂ ನನ್ನ ಬೆಂಬಲಕ್ಕೆ ಬರಲಿಲ್ಲ ಎಂದು ತಮ್ಮ ನೋವನ್ನು ಹೊರ ಹಾಕಿದ್ದಾರೆ.

SCROLL FOR NEXT