ಬ್ಯಾಂಕಾಕ್: ಟಿ20 ಇತಿಹಾಸದಲ್ಲೇ ಕನಿಷ್ಠ ಮೊತ್ತಕ್ಕೆ ನೇಪಾಳ ಮಹಿಳಾ ತಂಡವನ್ನು ಆಲೌಟ್ ಮಾಡಿ ಭಾರತ ಇತಿಹಾಸ ನಿರ್ಮಿಸಿದೆ.
ಟಿ20 ಏಷ್ಯಾ ಕಪ್ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿತು. 121 ರನ್ ಗಳ ಗುರಿ ಬೆನ್ನಟ್ಟಿದ ನೇಪಾಳ ತಂಡ ಪೆವಲಿಯನ್ ಪರೇಡ್ ನಡೆಸಿತು. ನೇಪಾಳ 16.3 ಓವರ್ ಗಳಲ್ಲಿ 21 ರನ್ ಗಳಿಗೆ ಸರ್ಪಪತನ ಕಂಡಿತು. ಇದು ಮಹಿಳಾ ಟಿ20 ಇತಿಹಾಸದ ಅತ್ಯಂತ ಕಡಿಮೆ ಮೊತ್ತವಾಗಿದೆ.