ಮುಂಬೈ: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 1 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ನ ಎರಡನೇ ದಿನದಾಟ ಅಂತ್ಯಕ್ಕೆ ಭಾರತ 146 ರನ್ ಗಳಿಸಿದ್ದು, ಮುನ್ನಡೆಗಾಗಿ 254 ರನ್ ಗಳಿಸಬೇಕಿದೆ. ಭಾರತ ಪರ ಕೆಎಲ್ ರಾಹುಲ್ 24 ರನ್ ಗಳಿಸಿ ಔಟಾದರೆ, ಮುರಳಿ ವಿಜಯ್ ಅಜೇಯ 70 ಹಾಗೂ ಚೇತೇಶ್ವರ ಪೂಜಾರ 47 ರನ್ ಗಳಿಸಿ ನಾಳೆ ಕಣಕ್ಕಿಳಿಯಲಿದ್ದಾರೆ.
ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್ ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 400 ರನ್ ಗಳಿಸಿತ್ತು. ಇಂಗ್ಲೆಂಡ್ ಪರ ಕೂಕ್ 46, ಜೆನ್ನಿಂಗ್ಸ್ 112, ರೂಟ್ 21, ಮೊಹಿನ್ ಅಲಿ 50, ಬಟ್ಲರ್ 76 ಮತ್ತು ಬಾಲ್ 31 ರನ್ ಗಳಿಸಿ ಔಟಾಗಿದ್ದಾರೆ.
ಟೀಂ ಇಂಡಿಯಾ ಪರ ಆರ್ ಅಶ್ವಿನ್ 6, ರವೀಂದ್ರ ಜಡೇಜಾ 4 ವಿಕೆಟ್ ಪಡೆದಿದ್ದಾರೆ.