ಮುಂಬೈನ ವಾಖೆಂಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದು ಇದರೊಂದಿಗೆ ಈ ವರ್ಷದ ಮೂರೂ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸರ್ವಾಧಿಕ ರನ್ ಬಾರಿಸಿದ ಬ್ಯಾಟ್ಸ್ ಮನ್ ಆಗಿದ್ದಾರೆ.
2016ರಲ್ಲಿ ಕೊಹ್ಲಿ ಅವರು ಒಟ್ಟು ರನ್ ಗಳಿಕೆ 2,492ಕ್ಕೆ ಏರಿದ್ದು ಆ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ. ಇನ್ನು ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡದ ಆಟಗಾರ 2,399 ರನ್ ಗಳಿಸುವ ಮೂಲಕ ದ್ವಿತೀಯ ಸ್ಥಾನದಲ್ಲಿದ್ದಾರೆ.
2016ರಲ್ಲಿ 2 ಸಾವಿರ ರನ್ ಪೇರಿಸಿದ ಉಳಿದ ಆಟಗಾರರೆಂದರೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್(2,186) ಮತ್ತು ಸ್ಟೀವನ್ ಸ್ಮಿತ್(2,048).