ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ
ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಬದುಕಿನ 3ನೇ ದ್ವಿಶತಕ ಬಾರಿಸಿದ ಬೆನ್ನಲ್ಲೇ ಅವರಿಗೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದ್ದು, ಇದೇ ನಿರ್ವಹಣೆ ತೋರಿದರೆ ಮುಂದಿನ ಕೆಲವೇ ವರ್ಷಗಳಲ್ಲಿ ಕೊಹ್ಲಿ ವಿಶ್ವದ ಸರ್ವಶ್ರೇಷ್ಠ ಬ್ಯಾಟ್ಸ್ ಮನ್ ಎನಿಸಿಕೊಳ್ಳಲಿದ್ದಾರೆ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ಈ ಹಿಂದಿಯೇ ನಾನು ಹೇಳಿದ್ದೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಸೋಫಾದಲ್ಲಿ ಕುಳಿತು ನೋಡುವುದಷ್ಟೇ ನಮ್ಮ ಕೆಲಸ. ಯಾಕೆಂದರೆ ಕ್ರಿಕೆಟ್ ಕುರಿತಾಗಿ ಅವರಿಗೆ ಇರುವ ಪ್ಯಾಶನ್ ತಂಡದ ಗೆಲುವಿಗೆ ಪ್ರಮುಖ ಕಾರಣವಾಗುತ್ತದೆ ಎಂದರು.
ವಿರಾಟ್ ಕೊಹ್ಲಿ ಅವರ ಭಾರತದ ಕ್ರಿಕೆಟ್ ಅನ್ನು ಸುಧಾರಿಸಬೇಕೆಂಬ ಗುರಿ ಪ್ರಶಂಸನಾರ್ಹ ಎಂದು ಗಂಗೂಲಿ, ಕೊಹ್ಲಿ ಮುಂದಿನ ದಿನಗಳಲ್ಲಿ ಇದೇ ರೀತಿ ನಿರ್ವಹಣೆ ತೋರಿದರೆ ವಿಶ್ವದ ಸರ್ವಶ್ರೇಷ್ಠ ಬ್ಯಾಟ್ಸ್ ಮನ್ ಆಗಲಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics