ಕ್ರಿಕೆಟ್

ಐದನೇ ಟೆಸ್ಟ್ ಪಂದ್ಯ: ಮೊಯಿನ್ ಅಲಿ ಶತಕ; ದಿನದಂತ್ಯಕ್ಕೆ ಇಂಗ್ಲೆಂಡ್ 284/4

Guruprasad Narayana
ಚೆನ್ನೈ: ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ, ಮೊದಲ ದಿನದ ಅಂತ್ಯಕ್ಕೆ, ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ನಾಲ್ಕು ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿದೆ. 
ಮೊಯಿನ್ ಅಲಿ ಶತಕ ಗಳಿಸಿ ಇನ್ನು ಔಟಾಗದೆ ಉಳಿದಿದ್ದಾರೆ. ಇವರು 222 ಬಾಲ್ ಗಳಲ್ಲಿ 120 ರನ್ ಗಳಿಸಿ ಆಡುತ್ತಿದ್ದು, ಇಂಗ್ಲೆಡ್ ಒಳ್ಳೆಯ ಮೊತ್ತ ಗಳಿಸಲು ಸಹಕರಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಆಡಿದ ಜೋ ರೂಟ್ 88 ರನ್ ಗಳಿಸಿ ಔಟಾಗಿ, ಶತಕ ಗಳಿಸುವಲ್ಲಿ ವಿಫಲರಾಗಿದ್ದಾರೆ. 
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಇಂಗ್ಲೆಂಡ್ ಆರಂಭದಲ್ಲಿ ಆಘಾತ ಕಂಡರೂ ನಂತರ ಚೇತರಿಸಿಕೊಂಡು 284 ರನ್ ಪೇರಿಸಲು ಸಫಲವಾಗಿದೆ. 
ಬೌಲಿಂಗ್ ನಲ್ಲಿ ರವೀಂದ್ರ ಜಡೇಜಾ 3 ವಿಕೆಟ್ ಕಬಳಿಸಿದ್ದರೆ, ಇಶಾಂತ್ ಶರ್ಮ ಒಂದು ವಿಕೆಟ್ ಪಡೆಯಲು ಸಫಲರಾಗಿದ್ದಾರೆ. 
ಸದ್ಯಕ್ಕೆ ಭಾರತ ಈ ಟೆಸ್ಟ್ ಸರಣಿಯಲ್ಲಿ 3-0 ಯಿಂದ ಮುಂದಿದ್ದು ಸರಣಿಯನ್ನು ಈಗಾಗಲೇ ಗೆದ್ದುಕೊಂಡಿದೆ.
SCROLL FOR NEXT