ವಿಶಾಖಪಟ್ಟಣಂ: ರಣಜಿ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಗಿದು ಕ್ವಾರ್ಟರ್ ಫೈನಲ್ ಪಂದ್ಯಗಳಿಗೆ ಅಖಾಡ ಸಿದ್ಧವಾಗಿದ್ದು ಸೆಮಿಫೈನಲ್ ಪ್ರವೇಶಕ್ಕಾಗಿ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಕಾದಾಡಲಿವೆ.
ರಣಜಿ ಲೀಗ್ ನಲ್ಲಿ ಕರ್ನಾಟಕ ಸೇರಿದಂತೆ ತಮಿಳುನಾಡು, ಹೈದರಾಬಾದ್, ಮುಂಬೈ, ಗುಜರಾತ್, ಒಡಿಶಾ, ಹರಿಯಾಣ, ಜಾರ್ಖಂಡ್ ತಂಡಗಳು ಉತ್ತಮ ಪ್ರದರ್ಶನ ನೀಡಿ ಕ್ವಾಟರ್ ಫೈನಲ್ಗೆ ಲಗ್ಗೆ ಇಟ್ಟಿವೆ. ಕ್ವಾಟರ್ ಫೈನಲ್ ಪಂದ್ಯದಲ್ಲಿ ಗೆದ್ದವರು ಸೆಮಿ ಫೈನಲ್ ಗೇರಲಿವೆ.
ಪ್ರಸ್ತುತ ರಣಜಿ ಟೂರ್ನಿಯಲ್ಲಿ ಕರ್ನಾಟಕ ಬಲಿಷ್ಟ ತಂಡವಾಗಿದೆ. ಲೀಗ್ ಹಂತದ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಒಟ್ಟು 8 ಪಂದ್ಯವನ್ನು ಆಡಿ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಕೇವಲ 1 ಪಂದ್ಯದಲ್ಲಿ ಮಾತ್ರ ಸೋಲು ಕಂಡಿದ್ದು 2 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ. ಕರ್ನಾಟಕದಿಂದ ಇದೇ ಪ್ರದರ್ಶನ ಮುಂದುವರೆದರೆ ಈ ಬಾರಿ ರಣಜಿ ಚಾಂಪಿಯನ್ ಆಗುವುದರಲ್ಲಿ ಸಂದೇಹವೆಇಲ್ಲ.