ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಪುತ್ರನಿಗೆ ನಾಮಕರಣ ಮಾಡಲಾಗಿದ್ದು, ಪಠಾಣ್ ಕುಟುಂಬದ ಕುಡಿಗೆ ಇಮ್ರಾನ್ ಖಾನ್ ಪಠಾಣ್ ಎಂದು ನಾಮಕರಣ ಮಾಡಲಾಗಿದೆ.
ಈ ಬಗ್ಗೆ ಸ್ವತಃ ಇರ್ಫಾನ್ ಪಠಾಣ್ ಅವರು ಇಂದು ಟ್ವೀಟ್ ಮಾಡಿದ್ದು, ಇಮ್ರಾನ್ ಹೆಸರು ತಮಗೂ ತಮ್ಮ ಕುಟುಂಬಕ್ಕೂ ತುಂಬಾ ಇಷ್ಟವಾಗಿದೆ. ಅಲ್ಲದೆ ವೈಯುಕ್ತಿಕವಾಗಿಯೂ ಇಮ್ರಾನ್ ಹೆಸರು ತನಗಿಷ್ಟ. ಹೀಗಾಗಿ ಪುತ್ರನಿಗೆ ಇಮ್ರಾನ್ ಖಾನ್ ಪಠಾಣ್ ಎಂದು ನಾಮಕರಣ ಮಾಡಲಾಗಿದೆ ಎಂದು ಹೇಳಿದರು.
ಪಾಕಿಸ್ತಾನದ ಖ್ಯಾತ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ರಾಜಕಾರಣಿಯ ಅವರ ಹೆಸರೂ ಕೂಡ ಇಮ್ರಾನ್ ಖಾನ್ ಆಗಿರುವುದು ವಿಶೇಷ. ಇರ್ಫಾನ್ ಪಠಾಣ್ ಅವರ ಪತ್ನಿ ಸಫಾ ಬೇಗ್ ಅವರು ಡಿಸೆಂಬರ್ 19 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು.