ಶ್ರೀಶಾಂತ್ ಮತ್ತು ಹರ್ ಭಜನ್ ಸಿಂಗ್ 
ಕ್ರಿಕೆಟ್

ಮೈದಾನದಲ್ಲಿ ಶ್ರೀಶಾಂತ್ ಮಾಡಿದ್ದು ದೊಡ್ಡ ನಾಟಕ: ಕಪಾಳ ಮೋಕ್ಷ ಪ್ರಕರಣ ಕುರಿತು ಹರ್ಭಜನ್ ಮಾತು

ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಆಟಗಾರ ಶ್ರೀಶಾಂತ್ ಗೆ ಕಪಾಳಮೋಕ್ಷ ಮಾಡಿದ್ದ ಪ್ರಕರಣ ಸಂಬಂಧ ಕ್ಷಮೆ ..

ನವದೆಹಲಿ: ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಆಟಗಾರ ಶ್ರೀಶಾಂತ್ ಗೆ ಕಪಾಳಮೋಕ್ಷ ಮಾಡಿದ್ದ ಪ್ರಕರಣ ಸಂಬಂಧ ಕ್ಷಮೆ ಕೇಳಿದ್ದಾರೆ.

ಖಾಸಗಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹರ್ ಭಜನ್ ಮುಂಬಯಿ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡು ನಡುವೆ ನಡೆದ ಪಂದ್ಯದ ವೇಳೆ ಶ್ರೀಶಾಂತ್ ಕೆನ್ನೆಗೆ ಹೊಡೆದಿದ್ದೆ. ನಾನು ಹಾಗೆ ಮಾಡಬಾರದಿತ್ತು.

ಆ ವೇಳೆ ನಾನು ತಪ್ಪು ಮಾಡಿದೆ. ಈ ಹಿಂದೆ ಹಲವು ಬಾರಿ ನಾನು ತಪ್ಪು ಮಾಡಿದ್ದೇನೆ. ಆ ಘಟನೆಗಳ ನಂತರ ನಾನು ತುಂಬಾ ಕಲಿತಿದ್ದೇನೆ. ಆದರೆ ಶ್ರೀಶಾಂತ್ ಕೆನ್ನೆಗೆ ಹೊಡೆದ ಘಟನೆ ನನಗೆ ಮರೆಯಲಾಗುತ್ತಿಲ್ಲ. ಈ ಪ್ರಕರಣದ ನಂತರ ಶ್ರೀಶಾಂತ್ ಅತ್ತರು, ಅಲ್ಲಿ ನಾಟಕ ಮಾಡಿದರು, ನಾನು ತೀವ್ರ ಮುಜುಗರಕ್ಕೊಳಗಾದೆ.  ಆಗ ಎಲ್ಲರೂ ನನ್ನ ಬೈಯ್ದರು.ಎಲ್ಲವೂ ನನ್ನದೇ ತಪ್ಪು ಎಂಬಂತೆ ಬಿಂಬಿಸಿದರು, ನಾನು ಹಾಗೆ ಮಾಡಬಾರದಿತ್ತು. ಆ ನಂತರ ಕ್ಷಮೆ ಕೇಳಿದೆ ಎಂದು ಆ ಪ್ರಕರಣವನ್ನು ಹರ್ ಭಜನ್ ಸಿಂಗ್ ಮೆಲುಕು ಹಾಕಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

ಬೆಂಗಳೂರು: 500 ರೂ.ನಲ್ಲಿ ಪುಲ್ ಡೇ ಬಿಂದಾಜ್ ಲೈಫ್! ಪಶ್ಚಿಮ ಬಂಗಾಳ ಯುವತಿಯ ವಿಡಿಯೋ ವೈರಲ್

SCROLL FOR NEXT