ಕ್ರಿಕೆಟ್

ಆರ್. ಅಶ್ವಿನ್ ಜಗತ್ತಿನ ನಂ.1 ಆಲ್ ರೌಂಡರ್

Vishwanath S

ದುಬೈ: ಟೀಂ ಇಂಡಿಯಾ ಆಟಗಾರ ರವಿಚಂದ್ರನ್ ಅಶ್ವಿನ್ ಜಗತ್ತಿನ ನಂಬರ್ 1 ಆಲ್ ರೌಂಡರ್ ಆಗಿ ಸ್ಥಾನ ಪಡೆದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಹೊಸ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದ್ದು, ರವಿಚಂದ್ರನ್ ಅಶ್ವಿನ್ 406 ಅಂಕಗಳೊಂದಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಅಗ್ರಮಾನ್ಯ ಆಲ್ ರೌಂಡರ್ ಆಗಿ ಹೊರಹೊಮ್ಮಿದ್ದಾರೆ. ಇನ್ನು ಟಾಸ್ ಬೌಲರ್ ಗಳ ಪಟ್ಟಿಯಲ್ಲಿ ಇಂಗ್ಲೆಂಡ್ ನ ಜೇಮ್ಸ್ ಆ್ಯಂಡರ್ಸನ್ 877 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 871 ಅಂಕಗಳೊಂದಿಗೆ ಅಶ್ವಿನ್ 2ನೇ ಸ್ಥಾನದಲ್ಲಿದ್ದಾರೆ.

ಆರ್. ಅಶ್ವಿನ್ ಒಟ್ಟು 32 ಟೆಸ್ಟ್ ಪಂದ್ಯಗಳನ್ನಾಡಿದ್ದು, ಒಟ್ಟಾರೆ 176 ವಿಕೆಟ್ ಗಳನ್ನು ಪಡೆದಿದ್ದಾರೆ. ಇನ್ನು 31.68ರ ಸರಾಸರಿಯಲ್ಲಿ 1204 ರನ್ ಗಳಿಸಿದ್ದು, 124 ರನ್ ಗರಿಷ್ಠ ಮೊತ್ತ. ಇದರಲ್ಲಿ 2 ಶತಕ ಹಾಗೂ 6 ಅರ್ಧ ಶತಕ ದಾಖಲಾಗಿದೆ.

SCROLL FOR NEXT