ಕಡಿಮೆ ಸಂಭಾವನೆ ಹಿನ್ನೆಲೆ ವೆಸ್ಟ್ ಇಂಡೀಸ್ ಕ್ರಿಕೆಟಿಗ ಮಾರ್ಲೊನ್ ಸ್ಯಾಮುಯೆಲ್ಸ್ ಟೆಸ್ಟ್ ಕ್ರಿಕೆಟಿಗೆ ವಿದಾಯ ಘೋಷಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಕಡಿಮೆ ಸಂಭಾವನೆ ನೀಡುತ್ತಿದೆ ಎಂದು ಈ ಹಿಂದೆ ಹಲವು ಆಟಗಾರರು ಆರೋಪಿಸಿದ್ದರು. ಇದೀಗ ಸ್ಯಾಮುಯೆಲ್ಸ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಲಿದ್ದಾರೆ.
ವೆಸ್ಟ್ ಇಂಡೀಸ್ ಪರ 65 ಟೆಸ್ಟ್ ಪಂದ್ಯಗಳನ್ನು ಆಡಿರುವ ಸ್ಯಾಮುಯೆಲ್ಸ್ 3.673 ರನ್ ಗಳಿಸಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ಗೆ ಟಿ20 ವಿಶ್ವಕಪ್ ಗೆಲ್ಲಿಸಿ ಕೊಟ್ಟ ಕೀರ್ತಿ ಸ್ಯಾಮುಯೆಲ್ಸ್ ಪಾಲಿಗಿದೆ.