ಕ್ರಿಕೆಟ್

ಟೀಂ ಇಂಡಿಯಾ ವಿರುದ್ಧ ಗೆದ್ದ ಸರಣಿ ನನ್ನ ಜೀವನದ ಅವಿಸ್ಮರಣಿಯ ಪಂದ್ಯ: ರಬಾಡಾ

Vishwanath S

ಜೋಹಾನ್ಸ್ ಬರ್ಗ್: ಕ್ರಿಕೆಟ್ ಬದುಕಿಗೆ ಪಾರ್ದಾಪಣೆ ಮಾಡಿದ ಕಡಿಮೆ ಅವಧಿಯಲ್ಲೇ ದಕ್ಷಿಣ ಆಫ್ರಿಕಾದ ವರ್ಷದ ಕ್ರಿಕೆಟಿಗ ಪ್ರಶಸ್ತಿ ಸೇರಿ ಆರು ಪ್ರಶಸ್ತಿಗಳನ್ನು ಗೆದ್ದಿರುವ ವೇಗಿ ರಬಾಡಾ ಭಾರತ ವಿರುದ್ಧದ ಸರಣಿ ಜಯ ನನ್ನ ಜೀವನದ ಅಸ್ಮರಣೀಯ ಪಂದ್ಯ ಎಂದು ಹೇಳಿದ್ದಾರೆ.

ವರ್ಷದ ಕ್ರಿಕೆಟಿಗ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ರಬಾಡಾ, ಭಾರತ ನೆಲದಲ್ಲಿ ಜಯಿಸಿದ ಸರಣಿ ನನ್ನ ಜೀವನದ ಅವಿಸ್ಮರಣೀಯ ಸರಣಿಯಾಗಿತ್ತು ಎಂದು ಹೇಳಿದ್ದಾರೆ.

ಆರು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ರಬಾಡಾ ವೈಯಕ್ತಿಕ ಗರಿಷ್ಠ ಪ್ರಶಸ್ತಿ ಗಳಿಸಿ ದಕ್ಷಿಣ ಆಫ್ರಿಕಾದ  ಅಗ್ರಮಾನ್ಯ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾದ ಆಶೀಮ್ ಆಮ್ಲಾ ಮತ್ತು ಎಬಿಡಿ ವಿಲಿಯರ್ಸ್ ಅಗ್ರಮಾನ್ಯ ಆಟಗಾರರಾಗಿದ್ದರು.

ರಬಾಡಾ ಟೆಸ್ಟ್ ಕ್ರಿಕೆಟ್ ಹಾಗೂ ಏಕದಿನ ಪಂದ್ಯಗಳ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದರು. ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಇಮ್ರಾನ್ ತಾಹೀರ್ ಭಾಜನರಾಗಿದ್ದಾರೆ.

SCROLL FOR NEXT