ಟೀಂ ಇಂಡಿಯಾದ ವಿಂಡೀಸ್ ಪ್ರವಾಸ (ಸಂಗ್ರಹ ಚಿತ್ರ) 
ಕ್ರಿಕೆಟ್

ಭಾರತ ಕ್ರಿಕೆಟ್ ತಂಡದ ವೆಸ್ಟ್ ಇಂಡೀಸ್ ಪ್ರವಾಸದ ವೇಳಾ ಪಟ್ಟಿ ಪ್ರಕಟ

ಭಾರತ ಕ್ರಿಕೆಟ್ ತಂಡದ ವೆಸ್ಟ್ ಇಂಡೀಸ್ ಪ್ರವಾಸದ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಸತತ 49 ದಿನಗಳ ಪ್ರವಾಸ ಇದೇ ಜುಲೈ 6ರಿಂದ ಆರಂಭಗೊಳ್ಳಲಿದೆ.

ನವದೆಹಲಿ: ಭಾರತ ಕ್ರಿಕೆಟ್ ತಂಡದ ವೆಸ್ಟ್ ಇಂಡೀಸ್ ಪ್ರವಾಸದ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಸತತ 49 ದಿನಗಳ ಪ್ರವಾಸ ಇದೇ ಜುಲೈ 6ರಿಂದ ಆರಂಭಗೊಳ್ಳಲಿದೆ.

ವೆಸ್ಟ್ ಇಂಡೀಸ್ ಪ್ರವಾಸದ ಒಟ್ಟು 7 ವಾರಗಳಲ್ಲಿ ಅವಧಿಯಲ್ಲಿ ಟೀಂ ಇಂಡಿಯಾ ಎರಡು ಅಭ್ಯಾಸ ಪಂದ್ಯ ಹಾಗೂ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಜುಲೈ 6ರಂದು ವೆಸ್ಟ್ ಇಂಡೀಸ್  ನೆಲಕ್ಕೆ ಕಾಲಿಡಲಿರುವ ಭಾರತ ತಂಡ 2 ಅಭ್ಯಾಸ ಪಂದ್ಯಗಳನ್ನು ಆಡಿದ ನಂತರ ಜುಲೈ 21ರಿಂದ 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆತಿಥೇಯ ತಂಡವನ್ನು ಎದುರಿಸಲಿದೆ ಎಂದು ಬಿಸಿಸಿಐ  ತಿಳಿಸಿದೆ.

ಆಗಸ್ಟ್ 23ರಂದು ವಿರಾಟ್ ಕೊಹ್ಲಿ ನೇತೃತ್ವದ ತಂಡ 7 ವಾರಗಳ ಪ್ರವಾಸ ಮುಗಿಸಿ ಭಾರತಕ್ಕೆ ಮರಳಲಿದೆ. 2014ರಲ್ಲಿ ವೆಸ್ಟ್ ಇಂಡೀಸ್ ತಂಡ ಆಂತರಿಕ ಬಿಕ್ಕಟ್ಟಿನಿಂದಾಗಿ ಭಾರತ ಪ್ರವಾಸವನ್ನು  ಮೊಟಕುಗೊಳಿಸಿ ತವರಿಗೆ ವಾಪಸಾಗಿದ್ದ ವಿವಾದದ ಬಳಿಕ ಇದು ಉಭಯ ದೇಶಗಳ ನಡುವಿನ ಮೊದಲ ದ್ವಿಪಕ್ಷೀಯ ಸರಣಿಯಾಗಿದೆ. ಭಾರತ ತಂಡ ವಿಂಡೀಸ್ ಪ್ರವಾಸಕ್ಕೆ ಹೊಸ ಕೋಚ್  ಮತ್ತು ತರಬೇತಿ ಸಿಬ್ಬಂದಿ ಬಳಗದ ಜತೆಗೆ ತೆರಳುವ ನಿರೀಕ್ಷೆ ಇದೆ. ಈಗಾಗಲೆ ಆಯ್ಕೆ ಪ್ರಕ್ರಿಯೆ ಆರಂಭಿಸಿರುವ ಬಿಸಿಸಿಐ, ಜೂನ್ 25ರೊಳಗೆ ಹೊಸ ಕೋಚ್ ಹೆಸರು ಪ್ರಕಟಿಸುವ ಸಾಧ್ಯತೆ ಇದೆ.
 
ಕೆರಿಬಿಯನ್ ಪ್ರವಾಸ ವೇಳಾಪಟ್ಟಿ
ಜುಲೈ 9-10: ಅಭ್ಯಾಸ ಪಂದ್ಯ, ಸೇಂಟ್ ಕಿಟ್ಸ್
ಜುಲೈ 14-16: ಅಭ್ಯಾಸ ಪಂದ್ಯ, ಸೇಂಟ್ ಕಿಟ್ಸ್
ಜುಲೈ 21-25: ಮೊದಲ ಟೆಸ್ಟ್, ಆಂಟಿಗಾ
ಜು-30-ಆಗಸ್ಟ್ 3: 2ನೇ ಟೆಸ್ಟ್, ಜಮೈಕಾ
ಆಗಸ್ಟ್ 9-13: 3ನೇ ಟೆಸ್ಟ್, ಗ್ರಾಸ್ ಐಲೆಟ್
ಆಗಸ್ಟ್ 8-22: 4ನೇ ಟೆಸ್ಟ್, ಟ್ರಿನಿಡಾಡ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ