ಕ್ರಿಕೆಟ್

ಜಿಂಬಾಂಬ್ವೆ ವಿರುದ್ಧ ಎರಡನೇ ಪಂದ್ಯದಲ್ಲೂ ಭಾರತಕ್ಕೆ ಜಯ: ಭಾರತ ಮಡಿಲಿಗೆ ಏಕದಿನ ಸರಣಿ

Srinivas Rao BV

ಹರಾರೆ: ಜಿಂಬಾಂಬ್ವೆ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲೂ ಭಾರತ ಗೆಲುವು ಸಾಧಿಸಿದ್ದು ಆತಿಥೇಯ ತಂಡದ ವಿರುದ್ಧ 8 ವಿಕೆಟ್ ಗಳ ಜಯ ದಾಖಲಿಸಿದೆ. ಈ ಮೂಲಕ  ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ.  

ಮೊದಲನೇ ಏಕದಿನ ಪಂದ್ಯದಲ್ಲಿ 168 ರನ್ ಗಳಿಸಿ ಭಾರತದ ವಿರುದ್ಧ ಸೋತಿದ್ದ ಜಿಂಬಾಂಬ್ವೆ ತಂಡ ಎರಡನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇತ್ತು. ಆದರೆ ಈ ಬಾರಿ 35 ಓವರ್ ಗಳಿಗಿಂತಲೂ ಮುನ್ನವೇ 126 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಭಾರತಕ್ಕೆ ಸುಲಭದ ರನ್ ಗುರಿ ನೀಡಿತ್ತು. ಅಲ್ಪ ಮೊತ್ತದ ರನ್ ಗುರಿ ಬೆನ್ನಟ್ಟಿದ ಭಾರತ 26 .5 ಓವರ್ ಗಳಿಗೆ 2 ವಿಕೆಟ್ ನಷ್ಟಕ್ಕೆ 129 ರನ್ ಗಳಿಸುವ ಮೂಲಕ ಜಿಂಬಾಂಬ್ವೆ ವಿರುದ್ಧ ಜಯಗಳಿಸಿ 2 -0  ಅಂತರದ ಮೂಲಕ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ.  ಬ್ಯಾಟಿಂಗ್ ಆರಂಭಿಸಿದ ಜಿಂಬಾಂಬ್ವೆ ತಂಡ ಕಡಿಮೆ ಅವಧಿಯಲ್ಲಿ ಮೂರು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. .ಜಿಂಬಾಂಬ್ವೆ ಪರ ವುಸಿ ಸಿಬಾಂದ 53 ರನ್‌, ಚಿಬಾಭ 21 ರನ್‌ ಮತ್ತು ಸಿಕಂದರ‍್ ರಝಾ 16 ರನ್‌ ಗಳಿಸಿದರು. ಭಾರತದ ಪರ ಕಾಹಲ್ 25 ರನ್ ನೀಡಿ 3 ವಿಕೆಟ್, ಸ್ರಾನ್ 17 ರನ್ ನೀಡಿ 2 ವಿಕೆಟ್, ಕುಲಕರ್ಣಿ 31 ರನ್ ನೀಡಿ 2 ವಿಕೆಟ್, ಬುಮ್ರಾ 27 ರನ್ ನೀಡಿ 1 ವಿಕೆಟ್ ಮತ್ತು ಅಕ್ಷರ ಪಟೇಲ್ 22 ರನ್ ನೀಡಿ 1 ವಿಕೆಟ್ ಪಡೆದರು.

SCROLL FOR NEXT