ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾ
ಮುಂಬೈ: ಟೀಮ್ ಇಂಡಿಯಾ ಸ್ಫೋಟಕ ಬ್ಯಾಟ್ಸಮನ್ ಹಾಗೂ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮುಂಬೈನ ವರ್ಲಿಯಲ್ಲಿರುವ ಐಷಾರಾಮಿ ಅಪಾರ್ಟ್ ಮೆಂಟ್ ವೊಂದರಲ್ಲಿ 34 ಕೋಟಿ ರುಪಾಯಿಗೆ ಫ್ಲ್ಯಾಟ್ ಖರೀದಿಸಿದ್ದಾರೆ.
ಎಕೊನೊಮಿಕ್ ಟೈಮ್ಸ್ ವರದಿಯ ಪ್ರಕಾರ, ಓಂಕಾರ್ ರಿಯಲ್ಟರ್ಸ್ ಆಂಡ್ ಡವೆಲಪರ್ಸ್ ನಿರ್ಮಿಸಿದ ಐಷಾರಾಮಿ ಅಪಾರ್ಟ್ ಮೆಂಟ್ ನಲ್ಲಿ ಕೊಹ್ಲಿ ಮನೆ ಖರೀದಿಸಿದ್ದಾರೆ. 35ನೇ ಮಹಡಿಯಲ್ಲಿ ಕೊಹ್ಲಿ ಮನೆ ಇದ್ದು, ಸಮುದ್ರದ ತೀರದಲ್ಲಿದೆ. ಈ ಕಟ್ಟಡದ 29ನೇ ಮಹಡಿಯಲ್ಲಿ ಅರ್ಜುನ್ ಅವಾರ್ಡ್ ಗೆದ್ದ ಸಹ ಆಟಗಾರ ಯುವರಾಜ್ ಸಿಂಗ್ ಕೆಲ ವರ್ಷಗಳ ಹಿಂದೆ ಮನೆ ಖರೀದಿ ಮಾಡಿದ್ದರು.
ಕೆಲ ತಿಂಗಳುಗಳ ಹಿಂದೆ ಬಾಲಿವುಡ್ ನಟಿ ಹಾಗೂ ಗೆಳತಿ ಅನುಷ್ಕಾ ಶರ್ಮಾ ಜತೆ ಅನೇಕ ಅಪಾರ್ಟಮೆಂಟ್ಗಳಲ್ಲಿ ಫ್ಲ್ಯಾಟ್ ವೀಕ್ಷಿಸಿದ್ದ ಕೊಹ್ಲಿ ಇದೀಗ ಅರಬ್ಬಿ ಸಮುದ್ರದ ತೀರದಲ್ಲಿ ಐಷಾರಾಮಿ ಮನೆ ಖರೀದಿಸಿದ್ದಾರೆ. ಈ ಮನೆಯಿಂದ ಸಮುದ್ರದ ವಿಹಂಗಮ ನೋಟ ಕಾಣಿಸಲಿದ್ದು, ವಿಶಾಲವಾದ ಬೆಡ್ರೂಮ್ಳು, ಜಿಮ್ ಡೈನಿಂಗ್ ಹಾಲ್, ಸಿಟಿಂಗ್ ಬಾಲ್ಕನಿ, ಲಿವಿಂಗ್ ರೂಮ್ ಸಿಗಾರ್ ರೂಮ್ ಜತೆಗೆ ಪ್ರತ್ಯೇಕವಾದ ಅಡುಗೆಮನೆ ಹೊಂದಿದೆ ಎಂದು ವರದಿ ಮಾಡಲಾಗಿದೆ.