ಡಬ್ಲಿನ್: ವಿವಾದಾತ್ಮಕ ಬೌಲಿಂಗ್ ಶೈಲಿಯಿಂದಾಗಿ ಶ್ರೀಲಂಕಾದ ಆರಂಭಿಕ ಬೌಲರ್ ಶಾಮಿಂಡಾ ಇರಂಗಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿಷೇಧಕ್ಕೀಡಾಗಿದ್ದಾರೆ.
ಐರ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಹೃದಯ ಬಡಿತ ಹೆಚ್ಚಾಗಿದ್ದರಿಂದ ಇರಂಗಾರನ್ನು ಡಬ್ಲಿನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇರಂಗಾ ಅವರ ಬೌಲಿಂಗ್ ಶೈಲಿ ಸರಿಯಿರದ ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇರಂಗಾ ಬೌಲಿಂಗ್ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿಷೇಧಗೊಂಡಿರುವ ಇರಂಗಾಗೆ ದೇಶಿ ಕ್ರಿಕೆಟ್ ನಲ್ಲಿ ಅವಕಾಶ ನೀಡುವುದು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಬಿಟ್ಟ ವಿಚಾರವೆಂದು ಐಸಿಸಿ ಹೇಳಿದೆ.