ಹರಾರೆ: ಜಿಂಬಾಬ್ವೆ ವಿರುದ್ಧದ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 3 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿತು. 139 ರನ್ ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಜಿಂಬಾಬ್ವೆ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇದರೊಂದಿಗೆ ಟೀಂ ಇಂಡಿಯಾ 3 ರನ್ ಗಳಿಂದ ಭರ್ಜರಿ ಜಯ ಗಳಿಸಿ ಸರಣಿ ಕೈವಶ ಮಾಡಿಕೊಂಡಿತು.
ಜಿಂಬಾಬ್ವೆ ಪರ ಚಿಬಾಬಾ 5, ಮಸಕಜಾ 15, ಸಿಬಾಂಡ 28, ಮೋರ್ 26, ವಾಲರ್ 10, ಚಿಗುಂಬುರ 16 ಹಾಗೂ ಮರುಮ ಅಜೇಯ 23 ರನ್ ಗಳಿಸಿದ್ದಾರೆ.
ಟೀಂ ಇಂಡಿಯಾ ಪರ ಬರೀಂದರ್ ಸ್ರಾನ್, ಧವಳ್ ಕುಲಕರ್ಣಿ ತಲಾ 2 ವಿಕೆಟ್ ಹಾಗೂ ಅಕ್ಷರ್ ಪಟೇಲ್, ಚಹಾಲ್ ತಲಾ 1 ವಿಕೆಟ್ ಪಡೆದಿದ್ದಾರೆ.
ಟೀಂ ಇಂಡಿಯಾ ಪರ ಕೆಎಲ್ ರಾಹುಲ್ 22, ಮಂದೀಪ್ ಸಿಂಗ್ 4, ಅಂಬಟ್ಟಿ ರಾಯುಡು 20, ಮನೀಷ್ ಪಾಂಡ್ಯೆ 0, ಜಾದವ್ 58, ಎಂಎಸ್ ಧೋನಿ 9, ಅಕ್ಷರ್ ಪಟೇಲ್ ಅಜೇಯ 20 ಹಾಗೂ ಕುಲಕರ್ಣಿ 1 ರನ್ ಗಳಿಸಿದ್ದಾರೆ.
ಜಿಂಬಾಬ್ವೆ ಪರ ತಿರಿಪನೋ 3 ವಿಕೆಟ್ ಪಡೆದಿದ್ದಾರೆ.