ಕೋಚ್ ಆಯ್ಕೆ ಸಂದರ್ಶನ ಸಂಪೂರ್ಣ ಗೌಪ್ಯವಾಗಿತ್ತು: ಸೌರವ್ ಗಂಗೂಲಿ
ಕೋಚ್ ಆಯ್ಕೆ ಸಂದರ್ಶನ ಸಂಪೂರ್ಣ ಗೌಪ್ಯವಾಗಿತ್ತು. ನಾನು ಶಾಸ್ತ್ರಿಯವರ ಹೇಳಿಕೆಗೆ ಪ್ರತಿಕ್ರಿಯಿಸಲು...
ನವದೆಹಲಿ: ಕೋಚ್ ಆಯ್ಕೆ ಸಂದರ್ಶನ ಸಂಪೂರ್ಣ ಗೌಪ್ಯವಾಗಿತ್ತು. ನಾನು ಶಾಸ್ತ್ರಿಯವರ ಹೇಳಿಕೆಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ನೀವು ಕ್ರಿಕೆಟ್ ಸಲಹಾ ಸಮಿತಿಯ ಇತರ ಸದಸ್ಯರನ್ನೂ ಕೇಳಬೇಕು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ಕೋಚ್ ಸ್ಥಾನ ಕೈ ತಪ್ಪಿ ಹೋಗಲು ಸೌರವ್ ಗಂಗೂಲಿ ಕಾರಣ ಎಂದು ರವಿ ಶಾಸ್ತ್ರಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗಂಗೂಲಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಮಂಗಳವಾರ ತಾಜ್ ಬೆಂಗಾಲ್ ನಲ್ಲಿ ಸಾಯಂಕಾಲ 5ರಿಂದ 6ಗಂಟೆಯೊಳಗೆ ರವಿ ಶಾಸ್ತ್ರಿಯವರ ಸಂದರ್ಶನವಿತ್ತು. ಆ ಸಮಯದಲ್ಲಿ ತಾನು ಈಡನ್ ಗಾರ್ಡನ್ ಗೆ ಕ್ರಿಕೆಟ್ ಸಲಹಾ ಮಂಡಳಿಯ ಕಾರ್ಯಕಾರಿ ಸಮಿತಿ ಸಭೆಗೆ ಹೋಗಿದ್ದೆ ಎಂದು ಹೇಳಿದ್ದಾರೆ.
ಅಲ್ಲದೆ ಮಾಜಿ ಆಟಗಾರರಾದ ವಿವಿಎಸ್ ಲಕ್ಷ್ಮಣ್, ಸಚಿನ್ ತೆಂಡೂಲ್ಕರ್, ಸಂಜಯ್ ಜಗದಲೆಯವರ ಜತೆ ಸಂಜೆ 6.30ಕ್ಕೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದೆ ಎಂದು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.