ಕ್ರಿಕೆಟ್

ಆಫ್ರಿಕನ್ನರ ವಿರುದ್ಧ ಕಾಂಗರೂ ಸವಾರಿ

Srinivasamurthy VN

ಕೇಪ್ ಟೌನ್: ಕೇಪ್ ಟೌನ್ ನಲ್ಲಿ ಬುಧವಾರ ನಡೆದ 3ನೇ ಟಿ20 ಪಂದ್ಯದಲ್ಲಿ ಅತಿಥೇಯ ದ.ಆಫ್ರಿಕಾ ತಂಡ ಪ್ರವಾಸಿ ಆಸ್ಚ್ರೇಲಿಯಾ ವಿರುದ್ಧ 6 ವಿಕೆಟ್ ಗಳ ಸೋಲು ಕಾಣುವ ಮೂಲಕ ಟಿ20  ಸರಣಿಯನ್ನು ಕೈ ಚೆಲ್ಲಿದೆ.

ನಿನ್ನೆ ಕೇಪ್ ಟೌನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಗಳ ಬೃಹತ್ ಮೊತ್ತ ಪೇರಿಸಿತು. ದಕ್ಷಿಣ  ಆಫ್ರಿಕಾದ ಹಶೀಮ್ ಆಮ್ಲಾ ಕೇವಲ 62 ಎಸೆತಗಳಲ್ಲಿ ಬರೊಬ್ಬರಿ 97 ರನ್ ಸಿಡಿಸುವ ಮೂಲಕ ಆಫ್ರಿಕಾ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಆಫ್ರಿಕಾದ ಬೃಹತ್ ಮೊತ್ತವನ್ನು  ಬೆನ್ನುಹತ್ತಿದ ಆಸ್ಟ್ರೇಲಿಯಾ ತಂಡದ ಬ್ಯಾಟ್ಸಮನ್ ಗಳು ಸಾಂಘಿಕ ಹೋರಾಟ ನಡೆಸುವ ಮೂಲಕ 19.2 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದರು.

ಆಸ್ಟ್ರೇಲಿಯಾ ಪರ ಖವಾಜಾ (33 ರನ್), ಶೇನ್ ವಾಟ್ಸನ್ (42 ರನ್), ಸ್ಮಿತ್ (44 ರನ್) ಮತ್ತು ಡೇವಿಡ್ ವಾರ್ನರ್ (33 ರನ್) ಸಾಂಘಿಕ ಹೋರಾಟದ ಫಲವಾಗಿ ಆಸ್ಟ್ರೇಲಿಯಾ ಈ ಪಂದ್ಯವನ್ನು  ಗೆಲ್ಲುವ ಮೂಲಕ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿತು. ಈಗಾಗಲೇ ಟಿ20 ವಿಶ್ವಕಪ್ ಸರಣಿ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಮಹತ್ವ ಪಡೆದಿದ್ದ ಈ ಸರಣಿಯಲ್ಲಿ ಆಸ್ಟ್ರೇಲಿಯಾ ಗೆಲುವು  ಸಾಧಿಸುವ ಮೂಲಕ ತಮ್ಮ ಆತ್ಮನವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

SCROLL FOR NEXT