ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಟಿ20 ವಿಶ್ವಕಪ್ ಗೆ ಕ್ಷಣಗಣನೆ ಶುರುವಾಗಿದ್ದು, ಮೊದಲ ಟೀಂ ಇಂಡಿಯಾ-ನ್ಯೂಜಿಲೆಂಡ್ ಪಂದ್ಯಕ್ಕೆ ಗೂಗಲ್ ಡೂಡಲ್ ಮೂಲಕ ಕಿಚ್ಚು ಹಚ್ಚಿದೆ.
ಆರನೇ ಆವೃತಿಯ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಭಾರತ ಆಯೋಜಿಸುತ್ತಿದ್ದು, ಮೊದಲ ಪಂದ್ಯ ಇಂದು ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ನಾಗ್ಪುರದಲ್ಲಿ ನಡೆಯಲಿದೆ. ಇದಕ್ಕಾಗಿ ಗೂಗಲ್ ಡೂಡಲ್ ಮೂಲಕ ಸಮರ್ಪಿಸಿದೆ.
ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಪಂದ್ಯ ನಡೆಯುತ್ತಿರುವುದರಿಂದ ಉಭಯ ತಂಡಗಳ ಜೆರ್ಸಿ ಬಣ್ಣದ ಎರಡು ಬ್ಯಾಟ್ ಗಳನ್ನು ಕ್ಯಾಸ್ ಆಗಿ ಇಟ್ಟು ಮೇಲೆ ಚೆಂಡಿನ ಆಕಾರದೊಂದಿಗೆ ಗೂಗಲ್ ಸಂಸ್ಥೆ ಡೂಡಲ್ ತಯಾರಿಸಿದೆ.