ಮೌಕಾ ಮೌಕಾ ಜಾಹೀರಾತು 
ಕ್ರಿಕೆಟ್

ಭಾರತ-ಪಾಕ್ ಕ್ರಿಕೆಟ್ ಪಂದ್ಯ: ಮತ್ತೆ ಬಂತು ಮೌಕಾ ಮೌಕಾ ಜಾಹೀರಾತು

ವಿಶ್ವಕಪ್ ಪಂದ್ಯದ ವೇಳೆ ಭಾರೀ ಜನಪ್ರಿಯವಾಗಿದ್ದ ಸ್ಟಾರ್ ಸ್ಪೋರ್ಟ್ಸ್ ನ ಮೌಕಾ ಮೌಕಾ ಜಾಹೀರಾತು ಮತ್ತೆ ಬಂದಿದೆ. ಇದೀಗ ಐಸಿಸಿ ಟ್ವೆಂಟಿ -20 ವಿಶ್ವಕಪ್‌ನ...

ನವದೆಹಲಿ: ವಿಶ್ವಕಪ್ ಪಂದ್ಯದ ವೇಳೆ ಭಾರೀ ಜನಪ್ರಿಯವಾಗಿದ್ದ ಸ್ಟಾರ್  ಸ್ಪೋರ್ಟ್ಸ್ ನ ಮೌಕಾ ಮೌಕಾ  ಜಾಹೀರಾತು ಮತ್ತೆ ಬಂದಿದೆ. ಇದೀಗ ಐಸಿಸಿ ಟ್ವೆಂಟಿ -20 ವಿಶ್ವಕಪ್‌ನ ಜಾಹೀರಾತು ಇದಾಗಿದ್ದು,  ಮಾರ್ಚ್ 19 ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯದ ಮುನ್ನ ಈ ಜಾಹೀರಾತು ಮತ್ತೆ ಜನರ ಗಮನ ಸೆಳೆದಿದೆ. ಈ ಬಾರಿಯಾದರೂ ಪಾಕಿಸ್ತಾನ ಗೆಲ್ಲಲಿ ಎಂದು ಹಾರೈಸುವ, ಪಟಾಕಿ ಸಿಡಿಸಲು ಕಾದಿರುವ ಪಾಕ್ ಅಭಿಮಾನಿಯ ಆಸೆಯೇ ಈ ಜಾಹೀರಾತಿನ ಹೈಲೈಟ್.
ಇದೀಗ ಪ್ರಸಾರವಾಗುತ್ತಿರುವ ಹೊಸ ಜಾಹೀರಾತಿನಲ್ಲಿ ಪಾಕ್ ಅಭಿಮಾನಿ, ಪಾಕ್ ತಂಡದ ನಾಯಕ ಶಾಹಿದ್ ಅಫ್ರೀದಿಯಲ್ಲಿ, ಸಿಕ್ಸರ್ ಬಾರಿಸುವುದು ಹೇಗೆ ಎಂಬುದನ್ನು ಭಾರತ ತಂಡಕ್ಕೆ ತೋರಿಸಿಕೊಡಿ ಎಂದು ಮನವಿ ಮಾಡುತ್ತಾನೆ. ಅಫ್ರೀದಿಗೆ ವೀಡಿಯೋ ಸಂದೇಶ ಕಳಿಸುವ ಪಾಕ್ ಅಭಿಮಾನಿ ನಮ್ಮ ಕಾಲ ಮುಗಿಯಿತು ಎಂದು ಹೇಳಿ ತನ್ನ ಮಗನನ್ನು ಕರೆದು ಇವರಿಗಾಗಿಯಾದರೂ ಪಂದ್ಯ ಗೆದ್ದು ಬಿಡಿ ಎಂದು ಹೇಳುವ ದೃಶ್ಯ ಇದರಲ್ಲಿದೆ.
ವಿಶ್ವಕಪ್ ನಲ್ಲಿ ನಾಲ್ಕು ಬಾರಿ ಭಾರತ ಮತ್ತು ಪಾಕ್ ನಡುವಿನ ಪಂದ್ಯಗಳು ನಡೆದಿದ್ದು, ನಾಲ್ಕು ಬಾರಿಯೂ ಭಾರತ ವಿಜಯ ಸಾಧಿಸಿದೆ. ಮಾರ್ಚ್ 19ರಂದು ಟಿ-20 ವಿಶ್ವಕಪ್ ನಲ್ಲಿ 5ನೇ ಬಾರಿ ಪಾಕ್ ಭಾರತವನ್ನು ಎದುರಿಸಲಿದ್ದು, ಇಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲ ಸೃಷ್ಟಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ಬಂದ್: ಅಮೆರಿಕಾ ಭೀಕರ ಪ್ರತಿಕಾರದ ದಾಳಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ..!

ಸಂಪುಟ ವಿಸ್ತರಣೆಗೆ ಕೌಂಟ್‌ಡೌನ್: ಸಿದ್ದು-ಡಿಕೆಶಿ, ಹರಿಪ್ರಸಾದ್'ಗೆ 'ಕೈ' ಕಮಾಂಡ್ ಬುಲಾವ್, ದೆಹಲಿಯಲ್ಲಿ ನಿರ್ಣಾಯಕ ಸಭೆ..!

'ತಪ್ಪು ನಿರ್ಧಾರ ತೆಗೆದುಕೊಂಡಿದ್ದೀರಿ, ಅದರ ಬೆಲೆ ತೆರಬೇಕಾಗುತ್ತದೆ': Hormuz ಬಂದ್ ಮಾಡಿದ ಇರಾನ್, ಅಮೆರಿಕ ಮತ್ತೊಂದು ವೈಮಾನಿಕ ದಾಳಿ

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್