ಗೆಲುವಿನ ಸಂಭ್ರಮದಲ್ಲಿ ಭಾರತದ ವನಿತೆಯರು (ಸಂಗ್ರಹ ಚಿತ್ರ) 
ಕ್ರಿಕೆಟ್

ಐಸಿಸಿ ಮಹಿಳಾ ವಿಶ್ವಕಪ್: ಭಾರತ ತಂಡದ ಶುಭಾರಂಭ, ಬಾಂಗ್ಲಾ ವಿರುದ್ಧ 72 ರನ್ ಜಯ

ಐಸಿಸಿ ಟಿ20 ಮಹಿಳಾ ವಿಶ್ವಕಪ್ ನಲ್ಲಿ ಭಾರತದ ವನಿತೆಯರು ಶುಭಾರಂಭ ಮಾಡಿದ್ದು, ಬಾಂಗ್ಲಾ..

ಬೆಂಗಳೂರು: ಐಸಿಸಿ ಟಿ20 ಮಹಿಳಾ ವಿಶ್ವಕಪ್ ನಲ್ಲಿ ಭಾರತದ ವನಿತೆಯರು ಶುಭಾರಂಭ ಮಾಡಿದ್ದು, ಬಾಂಗ್ಲಾದೇಶದ ವಿರುದ್ಧ ಬರೊಬ್ಬರಿ 72 ರನ್ ಗಳ ಭರ್ಜರಿ ಜಯ ಸಾಧಿಸಿದ್ದಾರೆ.

ಮಂಗಳವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ತನ್ನ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ವನಿತೆಯರು, ನಿಗದಿತ 20 ಓವರ್ ಗಳಲ್ಲಿ ನಾಯಕಿ  ಮಿಥಾಲಿ ರಾಜ್ (42 ರನ್), ವಿಆರ್ ವನಿತಾ (38 ರನ್), ಕೌರ್ (40 ರನ್) ಮತ್ತು ವೇದಾ ಕೃಷ್ಣ ಮೂರ್ತಿ (ಅಜೇಯ 36) ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ 163 ರನ್ ಗಳ ಬೃಹತ್ ಮೊತ್ತವನ್ನು  ಪೇರಿಸಿತು.

ಬಾಂಗ್ಲಾಪರ ರುಮಾನ ಅಹ್ಮದ್ ಮತ್ತು ಫಹಿಮಾ ಖತುನ್ ತಲಾ 2 ವಿಕೆಟ್ ಪಡೆದರೆ, ನಹಿದಾ ಅಖ್ತರ್ 1 ವಿಕೆಟ್ ಪಡೆದರು. ಬಳಿಕ ಭಾರತ ನೀಡಿದ 164 ರನ್ ಗಳ ಬೃಹತ್ ಮೊತ್ತವನ್ನು  ಬೆನ್ನುಹತ್ತಿದ ಬಾಂಗ್ಲಾದೇಶ ಆಟಗಾರ್ತಿಯರು ಭಾರತದ ಸಂಘಟಿತ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು. ಅನುಜಾ ಪಾಟೀಲ್ ಮತ್ತು ಪೂನಂ ಯಾದವ್ ಅವರು ತಲಾ ವಿಕೆಟ್  ಪಡೆಯುವ ಮೂಲಕ ಬಾಂಗ್ಲಾ ಆಟಗಾರ್ತಿಯರ ಮೇಲೆ ಹೆತ್ತಡ ಹೆಚ್ಚಾಗುವಂತೆ ಮಾಡಿದರು. ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ ಬಾಂಗ್ಲಾದೇಶ ತಂಡ 5 ವಿಕೆಟ್ ನಷ್ಟಕ್ಕೆ 91 ರನ್  ಗಳನ್ನಷ್ಟೇ ಸೇರಿಸಲು ಶಕ್ತವಾಯಿತು.

ಆ ಮೂಲಕ ಭಾರತದ ವಿರುದ್ಧ ಬರೊಬ್ಬರಿ 72 ರನ್ ಗಳ ಹೀನಾಯ ಸೋಲು ಕಂಡಿತು. ಈ ಪಂದ್ಯದ ಜಯದೊಂದಿಗೆ ಭಾರತ 2 ಅಂಕಗಳಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 40 ರನ್  ಸಿಡಿಸಿ ಭಾರತ ಬೃಹತ್ ಮೊತ್ತಕ್ಕೆ ಕಾರಣರಾದ ಹರ್ಪೀತ್ ಕೌರ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಭೀಕರ ಅಪಘಾತ: ಯೂಟರ್ನ್‌ ವೇಳೆ ಗೂಡ್ಸ್ ವಾಹನ ಪಲ್ಟಿ, ಕಬ್ಬಿಣದ ಸರಳು ಬಿದ್ದು ಬೈಕ್ ಸವಾರ ದಾರುಣ ಸಾವು, Video

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್