ಭೀಕರ ಅಪಘಾತ: ಯೂಟರ್ನ್‌ ವೇಳೆ ಗೂಡ್ಸ್ ವಾಹನ ಪಲ್ಟಿ, ಕಬ್ಬಿಣದ ಸರಳು ಬಿದ್ದು ಬೈಕ್ ಸವಾರ ದಾರುಣ ಸಾವು, Video

ಅತಿಯಾದ ಭಾರ ಹೊತ್ತು ಸಾಗುತ್ತಿದ್ದ ವಾಹನ ಪಲ್ಟಿಯಾಗಿ, ಅದರಲ್ಲಿದ್ದ ಕಬ್ಬಿಣದ ಪೈಪ್‌ಗಳು ಸ್ಕೂಟರ್ ಸವಾರನ ಮೇಲೆ ಬಿದ್ದ ಪರಿಣಾಮ 56 ವರ್ಷದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Motorist crushed to death by iron pipes after overloaded vehicle overturns in Balanagar
ಕಬ್ಬಿಣದ ಸರಳು ಬಿದ್ದು ಬೈಕ್ ಸವಾರ ಸಾವು
Updated on: 

ಹೈದರಾಬಾದ್: ಯೂಟರ್ನ್‌ ವೇಳೆ ಗೂಡ್ಸ್ ವಾಹನ ಪಲ್ಟಿಯಾಗಿ ಅದರ ಮೇಲಿದ್ದ ಕಬ್ಬಿಣದ ಸರಳುಗಳು ಬೈಕ್ ಸವಾರನ ಮೇಲೆ ಬಿದ್ದು ಆತ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಹೈದರಾಬಾದ್ ನ ಬಾಲಾನಗರದಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಅತಿಯಾದ ಭಾರ ಹೊತ್ತು ಸಾಗುತ್ತಿದ್ದ ವಾಹನ ಪಲ್ಟಿಯಾಗಿ, ಅದರಲ್ಲಿದ್ದ ಕಬ್ಬಿಣದ ಪೈಪ್‌ಗಳು ಸ್ಕೂಟರ್ ಸವಾರನ ಮೇಲೆ ಬಿದ್ದ ಪರಿಣಾಮ 56 ವರ್ಷದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪೊಲೀಸರ ಪ್ರಕಾರ, ಕಬ್ಬಿಣದ ಪೈಪ್‌ಗಳ ಭಾರೀ ಕಟ್ಟುಗಳನ್ನು ಸಾಗಿಸುತ್ತಿದ್ದ ವಾಹನದಲ್ಲಿ ಅವುಗಳನ್ನು ಸಮರ್ಪಕವಾಗಿ ಭದ್ರಪಡಿಸಿರಲಿಲ್ಲ ಎನ್ನಲಾಗಿದೆ.

ಅಲ್ಲದೆ, ವಾಹನದ ಸುರಕ್ಷಿತ ಹೊರೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಭಾರವನ್ನು ಸಾಗಿಸಲಾಗುತ್ತಿತ್ತು ಎಂದು ಶಂಕಿಸಲಾಗಿದೆ.

Motorist crushed to death by iron pipes after overloaded vehicle overturns in Balanagar
26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್: ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'; Video ವೈರಲ್!

ಯೂಟರ್ನ್ ವೇಳೆ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ

ಚಾಲಕ ಯೂಟರ್ನ್‌ ತೆಗೆದುಕೊಳ್ಳುವಾಗ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ಪರಿಣಾಮ ವಾಹನ ಎಡಭಾಗಕ್ಕೆ ಪಲ್ಟಿಯಾಗಿದೆ. ಇದೇ ಸಂದರ್ಭದಲ್ಲಿ ಪ್ರಕಾಶ್ ಪವಾರ್ ತಮ್ಮ ಸ್ಕೂಟರ್‌ನಲ್ಲಿ ವಾಹನದ ಪಕ್ಕದಲ್ಲೇ ನಿಧಾನವಾಗಿ ಸಾಗುತ್ತಿದ್ದರು.

ವಾಹನ ಪಲ್ಟಿಯಾಗುತ್ತಿದ್ದಂತೆ ಅದರಲ್ಲಿದ್ದ ಕಬ್ಬಿಣದ ಪೈಪ್‌ಗಳ ಕಟ್ಟು ನೇರವಾಗಿ ಪ್ರಕಾಶ್ ಅವರ ಮೇಲೆ ಬಿದ್ದಿದೆ. ಭಾರೀ ಪೈಪ್‌ಗಳಡಿ ಸಿಲುಕಿದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ದೃಶ್ಯ

ಅಪಘಾತದ ಸಂಪೂರ್ಣ ಘಟನೆ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಕಾಶ್ ಪವಾರ್ ನಿಧಾನವಾಗಿ ಸ್ಕೂಟರ್ ಚಲಾಯಿಸುತ್ತಾ ಯೂಟರ್ನ್‌ ತೆಗೆದುಕೊಳ್ಳುತ್ತಿದ್ದ ವಾಹನದ ಪಕ್ಕಕ್ಕೆ ಬರುತ್ತಿರುವುದು ಕಂಡುಬಂದಿದೆ.

ವಾಹನ ವೇಗವಾಗಿ ತಿರುವು ತೆಗೆದುಕೊಳ್ಳುವ ವೇಳೆ ಸಮತೋಲನ ಕಳೆದುಕೊಂಡು ಪಲ್ಟಿಯಾಗಿದೆ. ಇದೇ ಸಂದರ್ಭದಲ್ಲಿ ವಾಹನದಲ್ಲಿದ್ದ ಪೈಪ್‌ಗಳು ಪಕ್ಕದಲ್ಲೇ ಚಲಿಸುತ್ತಿದ್ದ ಸ್ಕೂಟರ್ ಸವಾರನ ಮೇಲೆ ಬಿದ್ದ ಪರಿಣಾಮ ದುರಂತ ಸಂಭವಿಸಿದೆ.

ಪೊಲೀಸರಿಂದ ತನಿಖೆ

ಘಟನೆಗೆ ಸಂಬಂಧಿಸಿದಂತೆ ಬಾಲಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಾಹನದಲ್ಲಿ ಅತಿಯಾದ ಭಾರವನ್ನು ಸಾಗಿಸಲಾಗುತ್ತಿತ್ತೇ, ಕಬ್ಬಿಣದ ಪೈಪ್‌ಗಳನ್ನು ಸುರಕ್ಷಿತವಾಗಿ ಕಟ್ಟಲಾಗಿತ್ತೇ ಹಾಗೂ ಅಪಘಾತಕ್ಕೆ ಕಾರಣವಾದ ಅಂಶಗಳೇನು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com