ಬೆಂಗಳೂರು: ಕೆಮಿಕಲ್ ತುಂಬಿದ ಬಕೆಟ್ ಗೆ ಬಿದ್ದು ಮಗು ಸಾವು!

ಸುಬ್ರಮಣಿ ತನ್ನ ಕುಟುಂಬದೊಂದಿಗೆ ವಾಸವಿದ್ದ ಮನೆಯ ಪಕ್ಕದಲ್ಲೇ ಶಿವಂ ಕಾಪರ್ ಮೇಕರ್ ಎಂಬ ಕೆಮಿಕಲ್ ಫ್ಯಾಕ್ಟರಿ ಇದೆ. ನವೆಂಬರ್ 2ರಂದು ಬೆಳಗ್ಗೆ ಸುಮಾರು 11 ಗಂಟೆಯ ವೇಳೆಗೆ ಮಗು ತನ್ನ 8 ವರ್ಷದ ಅಕ್ಕನೊಂದಿಗೆ ಆಟವಾಡುತ್ತಿತ್ತು.
Subramani
ಮೃತಪಟ್ಟ ಮಗು ಸುಬ್ರಮಣಿ
Updated on: 

ಬೆಂಗಳೂರು: ಆಟವಾಡುತ್ತಿದ್ದ ಮಗುವೊಂದು ಆಕಸ್ಮಿಕವಾಗಿ ಕೆಮಿಕಲ್ ತುಂಬಿದ ಬಕೆಟ್ ಗೆ ಬಿದ್ದು ಮೃತಪಟ್ಟಿರುವ ಘಟನೆ ನಗರದ ಶ್ರೀರಾಂಪುರದ ಎಲ್.ಎನ್. ಪುರಂನಲ್ಲಿ ನಡೆದಿದೆ.

ನವೆಂಬರ್ 2ರಂದು ಈ ದುರಂತ ಸಂಭವಿಸಿದ್ದು, ಗಾಯಗೊಂಡಿದ್ದ ಒಂದು ವರ್ಷ 9 ತಿಂಗಳ ಮಗು ಸುಬ್ರಮಣಿ, ಸತತ 10 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿ ಕೊನೆಯುಸಿರೆಳೆದಿದೆ. ಮಗುವಿನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸುಬ್ರಮಣಿ ತನ್ನ ಕುಟುಂಬದೊಂದಿಗೆ ವಾಸವಿದ್ದ ಮನೆಯ ಪಕ್ಕದಲ್ಲೇ ಶಿವಂ ಕಾಪರ್ ಮೇಕರ್ ಎಂಬ ಕೆಮಿಕಲ್ ಫ್ಯಾಕ್ಟರಿ ಇದೆ. ನವೆಂಬರ್ 2ರಂದು ಬೆಳಗ್ಗೆ ಸುಮಾರು 11 ಗಂಟೆಯ ವೇಳೆಗೆ ಮಗು ತನ್ನ 8 ವರ್ಷದ ಅಕ್ಕನೊಂದಿಗೆ ಆಟವಾಡುತ್ತಿತ್ತು.

ಈ ವೇಳೆ ಆಟವಾಡುತ್ತಾ ಮನೆಯ ಪಕ್ಕದಲ್ಲಿದ್ದ ಕಾರ್ಖಾನೆಯ ಆವರಣಕ್ಕೆ ಮಗು ತೆರಳಿದೆ. ಅಲ್ಲಿ ಬಿಸಿ ಕೆಮಿಕಲ್ ತುಂಬಿದ್ದ ಬಕೆಟ್ ಇತ್ತು. ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಬಕೆಟ್‌ಗೆ ಬಿದ್ದಿದೆ. ಬಕೆಟ್‌ನಲ್ಲಿದ್ದ ಬಿಸಿ ರಾಸಾಯನಿಕದಿಂದಾಗಿ ಮಗುವಿಗೆ ಗಂಭೀರ ಗಾಯಗಳಾಗಿತ್ತು. ಇದನ್ನು ಗಮನಿಸಿದ ಮಗುವಿನ ಅಕ್ಕ ಕಾರ್ಖಾನೆಯಲ್ಲಿದ್ದವರು ತಕ್ಷಣ ಮಗುವನ್ನು ಹೊರತೆಗೆದಿದ್ದಾರೆ.

Subramani
ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ: ತಾಯಿ-ಮಗು ಸಾವು; ಹಲವರಿಗೆ ಗಾಯ

ಬಳಿಕ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಬಿಸಿ ಕೆಮಿಕಲ್‌ನಿಂದ ಉಂಟಾದ ಗಾಯಗಳ ತೀವ್ರತೆಯಿಂದಾಗಿ ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಮಗು ಕೆಮಿಕಲ್ ತುಂಬಿದ್ದ ಬಕೆಟ್‌ಗೆ ಬೀಳುವ ದೃಶ್ಯ ಕಾರ್ಖಾನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆ ಮಗುವನ್ನು ನಗರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡಿದರೂ ಮಗುವಿನ ಆರೋಗ್ಯದಲ್ಲಿ ನಿರೀಕ್ಷಿತ ಚೇತರಿಕೆ ಕಂಡುಬರಲಿಲ್ಲ. ಸುಮಾರು 10 ದಿನಗಳ ಕಾಲ ಆಸ್ಪತ್ರೆಯಲ್ಲಿ ನರಳಾಡಿ ಮಗು ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ. ಈ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X