ಕರಾಚಿ: ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಪಂದ್ಯ ಮುಗಿದ ನಂತರ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕನ ಸ್ಥಾನದಿಂದ ಶಾಹೀದ್ ಅಫ್ರೀದಿ ಅವರನ್ನು ಕೈ ಬಿಡಲಾಗುವುದು ಎಂದು ಪಿಸಿಬಿ (ಪಾಕಿಸ್ತಾನ್ ಕ್ರಿಕೆಟ್ ಮಂಡಳಿ) ಅಧ್ಯಕ್ಷ ಶಹರ್ಯಾರ್ ಖಾನ್ ಸೋಮವಾರ ತಿಳಿಸಿದ್ದಾರೆ.
ಲಾಹೋರ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಹರ್ಯಾರ್ ಖಾನ್, ವಿಶ್ವಕಪ್ ನಂತರ ನಾಯಕ ಸ್ಥಾನದಿಂದ ಕೆಳಗಿಳಿಯಬೇಕು ಎಂಬುದರ ಬಗ್ಗೆ ಪಿಸಿಬಿ ಮತ್ತು ಅಫ್ರೀದಿ ನಡುವೆ ಮಾತುಕತೆಗಳು ನಡೆದಿವೆ.
ವಿಶ್ವಕಪ್‌ನ ವರೆಗೆ ಮಾತ್ರ ಅಫ್ರೀದಿ ನಾಯಕತ್ವ ವಹಿಸಲಿದ್ದಾರೆ. ಅದು ಮುಗಿದ ನಂತರ ಅವರಾಗಿಯೇ ಆ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಒಂದು ವೇಳೆ ಅವರು ಮನಸ್ಸು ಬದಲಿಸಿ ನಾಯಕನಾಗಿ ಮುಂದುವರಿಯಲು ಇಚ್ಛಿಸಿದರೆ ಅವರನ್ನು ಟೀಂ ನಲ್ಲಿ ಇರಿಸಬೇಕೋ, ಬೇಡವೋ ಎಂಬುದರ ಬಗ್ಗೆ ನಾವು ತೀರ್ಮಾನಿಸುತ್ತೇವೆ ಎಂದು ಖಾನ್ ಹೇಳಿದ್ದಾರೆ.