ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆ್ಯಡಮ್ ಜಂಪಾ (ಚಿತ್ರಕೃಪೆ: ಕ್ರಿಕ್ ಇನ್ಫೋ) 
ಕ್ರಿಕೆಟ್

ಬಾಂಗ್ಲಾ ಬೌಲಿಂಗ್ ಗೆ ಬೆದರಿದ ಆಸಿಸ್ ಗೆ ಅಂತಿಮ ಹಂತದಲ್ಲಿ ಜಯ

ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಒಂದು ರೀತಿಯ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತಾದರೂ, ಅಂತಿಮ ಹಂತದ..

ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಿಜಕ್ಕೂ ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಪಂದ್ಯ ಸವಿಯುವ ಅವಕಾಶ ಸಿಕ್ಕಿತ್ತು. ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಒಂದು ರೀತಿಯ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತಾದರೂ, ಅಂತಿಮ ಹಂತದಲ್ಲಿ ಆಸ್ಟ್ರೇಲಿಯಾ ತಂಡ ಪಾರುಪತ್ಯ ಮೆರೆಯುವ ಮೂಲಕ 3 ವಿಕೆಟ್ ಗಳ ಜಯ ದಾಖಲಿಸಿತು.

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರಕ್ಕೆ ಬಂತು. ಅದರಂತೆ ಬಾಂಗ್ಲಾದೇಶವನ್ನು ಮೊದಲು ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಮೊದಲು ಬ್ಯಾಟಿಂಗ್  ಮಾಡಲು ಆರಂಭಿಸಿದ ಬಾಂಗ್ಲಾದೇಶಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಆರಂಭಿಕ ಆಟಗಾಗರ ಸೌಮ್ಯ ಸರ್ಕಾರ್ ಕೇವಲ 1 ರನ್ ಗಳಿಸಿ ಶೇನಾ ವಾಟ್ಸನ್ ಬೌಲಿಂಗ್ ನಲ್ಲಿ ಔಟ್ ಆದರು. ಆ  ಆರಂಭಿಕ ಆಘಾತದ ಬಳಿಕ ಚೇತರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಬಾಂಗ್ಲಾದೇಶ ಮಹಮದುಲ್ಲಾ (49 ರನ್) ಮತ್ತು ಶಕೀಬ್ ಅಲ್ ಹಸನ್ ಅವರ (33 ರನ್) ಸಮಯೋಚಿತ ಆಟದ ನೆರವಿನಿಂದ  ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 156 ರನ್ ಗಳ ಸವಾಲಿನ ಮೊತ್ತ ಕಲೆಹಾಕಿತು. ಆಸ್ಟ್ರೇಲಿಯಾ ಪರ ಎ ಜಂಪಾ 3 ವಿಕೆಟ್ ಕಬಳಿಸಿದರೆ, ವಾಟ್ಸನ್ 2 ವಿಕೆಟ್ ಪಡೆದರು.

ಬಾಂಗ್ಲಾದೇಶ ನೀಡಿದ 160 ರನ್ ಗಳ ಗುರಿಯನ್ನು ಬೆನ್ನುಹತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಟಗಾರರಾದ ಖವಾಜ (58 ರನ್) ಮತ್ತು ವಾಟ್ಸನ್ (21 ರನ್) ಉತ್ತಮ ಅಡಿಪಾಯ  ಹಾಕಿದರು. ಆದರೆ ಈ ಹಂತದಲ್ಲಿ ಅನಗತ್ಯವಾಗಿ ರನ್ ಕದಿಯಲು ಹೋದ ವಾಟ್ಸನ್ ರನ್ ಔಟ್ ಆದರು. ಬಳಿಕ ಬಂದ ಸ್ಮಿತ್ (14ರನ್) ಮತ್ತು ಡೇವಿಡ್ ವಾರ್ನರ್ (17 ರನ್) ಕೂಡ ಬಂದಷ್ಟೇ  ವೇಗವಾಗಿ ಔಟ್ ಆದರು. ವಾರ್ನರ್ ಹಿಂದೆಯೇ ಶಾನ್ ಮಾರ್ಷ್ ಕೂಡ ಔಟ್ ಆಗುವ ಮೂಲಕ ಆಸ್ಟ್ರೇಲಿಯಾ ಮೇಲೆ ಒತ್ತಡ ಹೇರುವಂತೆ ಮಾಡಿದರು. ನಂತರ ಬಂದ ಮ್ಯಾಕ್ಸ್ ವೆಲ್  ಆಸ್ಟ್ರೇಲಿಯಾ ಬ್ಯಾಟಿಂಗ್ ಗೆ ಕೊಂಚ ಬಲ ನೀಡುವ ಪ್ರಯತ್ನ ಮಾಡಿದರಾದರೂ, 26 ರನ್ ಗಳಿಸಿ ಅವರು ಕೂಡ ಪೆವಿಲಿಯನ್ ಸೇರಿಕೊಂಡರು.

ಈ ಹಂತದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ನಿಜಕ್ಕೂ ಪಂದ್ಯ ಕೈ ತಪ್ಪುವ ಭೀತಿ ಎದುರಾಗಿತ್ತು. ನೋಡ ನೋಡುತ್ತಿದ್ದಂತೆಯೇ ಶಕೀಬ್ ಅಲ್ ಹಸನ್ 3 ಪ್ರಮುಖ ವಿಕೆಟ್ ಕಬಳಿಸಿ ಆಸ್ಚ್ರೇಲಿಯಾವನ್ನು  ಕಂಗಾಲು ಮಾಡಿದರು. ಅದರೆ ಅಂತಿಮ ಹಂತದಲ್ಲಿ ಫಾಲ್ಕನರ್ ಮತ್ತು ನೇವಿಲ್ ಯಾವುದೇ ಆಪಾಯಕ್ಕೆ ಆಸ್ಪದ ನೀಡದೇ ಆಸ್ಟ್ರೇಲಿಯಾ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.  ಅಂತಿಮವಾಗಿ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 157 ರನ್ ಗಳನ್ನು ಗಳಿಸಿ ಜಯ ಗಳಿಸಿದರು. ಬಾಂಗ್ಲಾ ಪರ ಶಕೀಬ್ ಅಲ್ ಹಸನ್ 3 ವಿಕೆಟ್ ಕಬಳಿಸಿದರೆ,  ರಹಮಾನ್ 2 ವಿಕೆಟ್ ಮತ್ತು ಹುಸೇನ್ 1 ವಿಕೆಟ್  ಪಡೆದರು.

ಆಸ್ಟ್ರೇಲಿಯಾ ಪರ 3 ವಿಕೆಟ್ ಕಬಳಿಸಿದ ಜಂಪಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!