ಬೆಂಗಳೂರು: ಭಾರತ-ಬಾಂಗ್ಲಾದೇಶ ನಡುವಿನ ಟಿ20 ವಿಶ್ವಕಪ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರಂಭವಾಗಿದ್ದು, ಟಾಸ್ ಗೆದ್ದ ಬಾಂಗ್ಲಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಭಾರತದ ಪಾಲಿಗೆ ಇಂದಿನ ಪಂದ್ಯ ಮಹತ್ವದಾಗಿದ್ದು, ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಸಮರ್ಥವಾಗಿ ಎದುರಿಸಿ ಜಯ ಸಾಧಿಸಿದಲ್ಲಿ ಸೆಮಿಫೈನಲ್ ಪ್ರವೇಶಕ್ಕೆ ಹಾದಿ ಸುಗಮವಾಗಲಿದೆ.
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದ ವಿಶ್ವಾಸದಲ್ಲಿರುವ ಭಾರತ ತಂಡ ಟಿ20 ವಿಶ್ವಕಪ್ನ ತನ್ನ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸುತ್ತಿದೆ.
ನ್ಯೂಜಿಲೆಂಡ್ ವಿರುದ್ಧದ ಸೋಲಿನ ಬಳಿಕ ಒತ್ತಡ ಅನುಭವಿಸಿದ್ದ ಟೀಂ ಇಂಡಿಯಾ. ಪಾಕಿಸ್ತಾನ ವಿರುದ್ಧ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಹೈ ವೋಲ್ಟೆಜ್ ಪಂದ್ಯದಲ್ಲಿ ಮಣಿಸಿ ವಿಶ್ವಕಪ್ ಅಭಿಯಾನ ಜೀವಂತವಾಗಿಸಿಕೊಂಡಿತ್ತು. ಇಂದಿನ ಪಂದ್ಯದಲ್ಲಿ ರನ್ರೇಟ್ ಅನ್ನು ಹೆಚ್ಚಳ ಮಾಡಿಕೊಳ್ಳುವುದರೊಂದಿಗೆ ಭರ್ಜರಿ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಭದ್ರ ಪಡಿಸಿಕೊಳ್ಳಬೇಕಿದೆ.
ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಭಾರತ ತಂಡ, ಎರಡೂ ಪಂದ್ಯದಲ್ಲೂ ತನ್ನ ಖ್ಯಾತಿಗೆ ತಕ್ಕ ನಿರ್ವಹಣೆ ನೀಡಿಲ್ಲ. ಕಿವೀಸ್ ವಿರುದ್ಧ ಎಲ್ಲ ಬ್ಯಾಟ್ಸ್ಮನ್ಗಳು ನೀರಸ ಆಟವಾಡಿದ್ದರೆ, ಪಾಕಿಸ್ತಾನ ವಿರುದ್ಧ ಕೊಹ್ಲಿ ಹಾಗೂ ಯುವರಾಜ್ ಮಾತ್ರ ಮಿಂಚಿದ್ದರು. ಶಿಖರ್ ಧವನ್, ರೋಹಿತ್ ಶರ್ಮ ಹಾಗೂ ಸುರೇಶ್ ರೈನಾ ರನ್ ಗಳಿಸಲು ಪರದಾಡುತ್ತಿರುವುದು ತಂಡಕ್ಕೆ ಸಮಸ್ಯೆಯಾಗಿದೆ. ಕೊಹ್ಲಿ ಎಂದಿನಂತೆ ರನ್ ಗಳಿಸುತ್ತಿರುವುದು ನಾಯಕನ ಆತಂಕವನ್ನು ದೂರ ಮಾಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos