ನ್ಯೂಜಿಲೆಂಡ್ 
ಕ್ರಿಕೆಟ್

ಟಿ20 ವಿಶ್ವಕಪ್ ಸೆಮಿಫೈನಲ್ ಗೆ ನ್ಯೂಜಿಲೆಂಡ್ ಲಗ್ಗೆ

ಸೆಮಿಫೈನಲ್ ಆಸೆ ಜೀವಂತವಿರಿಸಿಕೊಳ್ಳಲು ನ್ಯೂಜಿಲೆಂಡ್ ವಿರುದ್ಧದ ಪಂದ್ಯವನ್ನು ಗೆಲ್ಲಬೇಕಿದ್ದ ಪಾಕಿಸ್ತಾನ ಸೋತು ಟೂರ್ನಿಯಿಂದ ಬಹುತೇಕ ಹೊರಬಿದ್ದಿದ್ದು, ಸತತ ಮೂರು...

ಮೊಹಾಲಿ: ಸೆಮಿಫೈನಲ್ ಆಸೆ ಜೀವಂತವಿರಿಸಿಕೊಳ್ಳಲು ನ್ಯೂಜಿಲೆಂಡ್ ವಿರುದ್ಧದ ಪಂದ್ಯವನ್ನು ಗೆಲ್ಲಬೇಕಿದ್ದ ಪಾಕಿಸ್ತಾನ ಸೋತು ಟೂರ್ನಿಯಿಂದ ಬಹುತೇಕ ಹೊರಬಿದ್ದಿದ್ದು, ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ನ್ಯೂಜಿಲೆಂಡ್ ಟಿ20 ವಿಶ್ವಕಪ್ ಸೆಮಿಫೈನಲ್ ಗೆ ಲಗ್ಗೆ ಹಿಟ್ಟಿದೆ.

ಮೊಹಾಲಿ ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಾರ್ಟಿನ್ ಗಪ್ಟಿಲ್ 80 ರನ್ ಗಳ ನೆರವಿನಿಂದ ನ್ಯೂಜಿಲೆಂಡ್ ತಂಡವು 5 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ 22 ರನ್ ಗಳಿಂದ ಪರಾಭವಗೊಂಡಿತು.

ಪಾಕಿಸ್ತಾನ ಪರ ಶಾರ್ಜೀಲ್ ಖಾನ್ 47, ಶೆಹಜಾದ್ 30, ಖಾಲಿದ್ 3, ಉಮರ್ ಅಕ್ಮಲ್ 24, ಅಫ್ರಿದಿ 19, ಶೋಯೆಬ್ ಮಲಿಕ್ ಅಜೇಯ 15, ಸರ್ಫ್ರಾಜ್ ಅಹ್ಮದ್ ಅಜೇಯ 11 ರನ್ ಗಳಿಸಿದ್ದಾರೆ.

ನ್ಯೂಜಿಲೆಂಡ್ ಪರ ಮಿಚೆಲ್ ಸ್ಯಾಂಟ್ನರ್, ಆಡಂ ಮಿಲ್ನೆ ತಲಾ 2 ವಿಕೆಟ್ ಪಡೆದರೆ, ಇಶ್ ಸೋಧಿ 1 ವಿಕೆಟ್ ಪಡೆದಿದ್ದಾರೆ.

ಕಿವೀಸ್ ಪರ ಗುಪ್ಟಿಲ್ 80, ವಿಲಿಯಮ್ಸನ್ 17, ಮುನ್ರೋ 7, ಅಂಡರ್ ಸನ್ 21, ಲ್ಯೂಕ್ ರಾಂಚಿ 11, ರಾಸ್ ಟೇಲರ್ ಅಜೇಯ 36 ಹಾಗೂ ಗ್ರಾಂಟ್ ಎಲಿಯಟ್ ಅಜೇಯ 1 ರನ್ ಗಳಿಸಿದ್ದಾರೆ.

ಪಾಕ್ ಪರ ಮೊಹಮ್ಮದ್ ಶಮಿ, ಶಾಹಿದ್ ಅಫ್ರಿದಿ ತಲಾ 2 ವಿಕೆಟ್ ಪಡೆದರೆ, ಮೊಹಮ್ಮದ್ ಇರ್ಫಾನ್ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ