ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಲ್ ರೌಂಡರ್ ಶೇನ್ ವಾಟ್ಸನ್ ಅವರು ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಟಿ20 ಪಂದ್ಯಾವಳಿ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳುವುದಾಗಿ ಗುರುವಾರ ಘೋಷಿಸಿದ್ದಾರೆ.
ಈಗಾಗಲೇ ಟೆಸ್ಟ್ ಕ್ರಿಕೆಟ್ ಗುಡ್ ಬೈ ಹೇಳಿದ್ದ 34 ವರ್ಷದ ಶೇನ್ ವಾಟ್ಸನ್ ಅವರು ಆಸ್ಟ್ರೇಲಿಯಾದ ಆಲ್ ರೌಂಡರ್ ಆಟಗಾರನಾಗಿದ್ದು, ಈಗ ಅಂತರಾಷ್ಟ್ರೀಯ ಏಕದಿನ ಹಾಗೂ ಟಿ20 ಕ್ರಿಕೆಟ್ ನಿಂದಲೂ ದೂರ ಸರಿಯುತ್ತಿದ್ದಾರೆ.
ಶೇನ್ ವಾಟ್ಸನ್ ಅವರು ಆಸ್ಟ್ರೇಲಿಯಾ ಪರ 59 ಟೆಸ್ಟ್ ಪಂದ್ಯಾವನ್ನಾಡಿದ್ದರು. ಅಲ್ಲದೇ ಹಲವು ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ದಾಖಲೆಗಳನ್ನು ಮಾಡಿದ್ದ ಹೆಗ್ಗಳಿಕೆ ವಾಟ್ಸನ್ ಅವರದ್ದು. ಟೆಸ್ಟ್ ಗಳಲ್ಲಿ 6 ಪ್ರಶಸ್ತಿಗಳನ್ನು ಗೆದ್ದಿದ್ದರು. ವಾಟ್ಸನ್ 59 ಟೆಸ್ಟ್, 190 ಏಕದಿನ, 52 ಟಿ20 ಹಾಗೂ 137 ಫಸ್ಟ್ ಕ್ಲಾಸ್ ಕ್ರಿಕೆಟ್ ಪಂದ್ಯವನ್ನಾಡಿದ್ದಾರೆ.