ಮೊಹಾಲಿ: ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತಕ್ಕೆ ಗೆಲ್ಲಲು 161 ರನ್ ಗಳ ಗುರಿಯನ್ನು ಆಸ್ಟ್ರೇಲಿಯಾ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಆರಂಭಿಕರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 160 ರನ್ ಕಲೆ ಹಾಕಿತು.
ಆಸ್ಟ್ರೇಲಿಯಾ ಪರ ಉಸ್ಮನ್ ಖ್ವಾಜಾ 26, ಫಿಂಚ್ 43, ಡೇವಿಡ್ ವಾರ್ನರ್ 6, ಸ್ಮಿತ್ 2, ಮ್ಯಾಕ್ಸ್ ವೇಲ್ 31, ಫಾಕ್ನರ್ 10 ರನ್ ಗಳಿಸಿದ್ದಾರೆ.
ಇನ್ನು ಶೇನ್ ವಾಟ್ಸನ್ ಅಜೇಯ 18 ಹಾಗೂ ನೆವೀಲ್ 10 ರನ್ ಸಿಡಿಸಿದ್ದಾರೆ.
ಟೀಂ ಇಂಡಿಯಾ ಪರ ಹಾರ್ದಿಕ್ ಪಾಂಡ್ಯಾ 2, ಆಶಿಶ್ ನೆಹ್ರಾ, ಬುಮ್ರಾ, ಅಶ್ವಿನ್ ಹಾಗೂ ಯುವರಾಜ್ ಸಿಂಗ್ ತಲಾ 1 ವಿಕೆಟ್ ಪಡೆದಿದ್ದಾರೆ.