ಕೊಹ್ಲಿ-ಅನುಷ್ಕಾ ಜೋಡಿ ಮತ್ತು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ 
ಕ್ರಿಕೆಟ್

ಕೊಹ್ಲಿ ಉತ್ತಮ ಕ್ರಿಕೆಟರ್ ಆಗಲು ಅನುಷ್ಕಾ ನೆರವು: ಸುನಿಲ್ ಗವಾಸ್ಕರ್

ಟಿ20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಗೆಲುವಿನ ಬಳಿಕ ಕೊಹ್ಲಿ ಗೆಳತಿ ಅನುಷ್ಕಾ ಶರ್ಮಾ ವಿರುದ್ಧ ಸಾಮಾಜಿಕ ಜಾಲತಾಣಗಳ..

ನವದೆಹಲಿ: ಟಿ20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಗೆಲುವಿನ ಬಳಿಕ ಕೊಹ್ಲಿ ಗೆಳತಿ ಅನುಷ್ಕಾ ಶರ್ಮಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದ್ದ ಟೀಕೆಗಳಿಗೆ  ಕುರಿತಂತೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಉತ್ತರ ನೀಡಿದ್ದು, ನಟಿಯ ಬೆಂಬಲಕ್ಕೆ ನಿಂತಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿರುವ ಗವಾಸ್ಕರ್, ವಿರಾಟ್‌ ಕೊಹ್ಲಿ ವೈಫಲ್ಯ ಕಂಡಾಗ ನಟಿ ಅನುಷ್ಕಾ ಶರ್ಮಾ ಅವರನ್ನು ಟೀಕಿಸುವುದು ಸರಿಯಲ್ಲ. ಅವರಿಗೂ ವೈಯಕ್ತಿಕ  ಬದುಕಿದೆ. ಅದನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದ್ದಾರೆ.

‘ಸರಣಿಯ ಮೊದಲ ಪಂದ್ಯದಲ್ಲಿ ಶತಕ ಗಳಿಸಿದ ಆಟಗಾರ ಮತ್ತೊಂದು ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಬಹುದು. ಆಟ ಎಂದ ಮೇಲೆ ಇದೆಲ್ಲಾ ಸಹಜ. ಹಿಂದೆ ಕೊಹ್ಲಿ ಒಂದೆರಡು ಪಂದ್ಯಗಳಲ್ಲಿ ರನ್‌  ಗಳಿಸಲು ವಿಫಲರಾಗಿರಬಹುದು. ಇದನ್ನೇ ಮುಂದಿಟ್ಟುಕೊಂಡು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅನುಷ್ಕಾ ಅವರನ್ನು ಲೇವಡಿ ಮಾಡಿದ್ದರು. ಇದು ಸರಿಯಲ್ಲ. ಇಂತಹ ಘಟನೆಗಳು  ನಿಜಕ್ಕೂ ಖಂಡನೀಯ. ಕೊಹ್ಲಿ ಮತ್ತು ಅನುಷ್ಕಾ ಅವರ ನಡುವಣ ಸಂಬಂಧ ಎಂತಹದ್ದು ಎಂಬುದು ನನಗೆ  ಗೊತ್ತಿಲ್ಲ. ಆದರೆ ಆಕೆ ಪ್ರತಿಭಾವಂತ ನಟಿ. ಅವರಿಬ್ಬರದ್ದು ಹೇಳಿ ಮಾಡಿಸಿದ ಜೋಡಿ  ಎಂದು ಗವಾಸ್ಕರ್ ಹೇಳಿದ್ದಾರೆ.

ಇದೇ ವೇಳೆ ಕೊಹ್ಲಿ ಕ್ರೀಡಾ ಬದುಕಿನ ಆರಂಭಿಕ ದಿನಗಳಲ್ಲಿ ಅವರಿಗೆ ಬೆಂಬಲವಾಗಿ ನಿಂತವರು ಅನುಷ್ಕಾ, ಕೊಹ್ಲಿಗೆ ಆತ್ಮಸ್ಥೈರ್ಯ ತುಂಬಿದ್ದರು. ಇದನ್ನು ಕೊಹ್ಲಿ ಕೂಡಾ ಬಹಿರಂಗವಾಗಿಯೇ   ಹೇಳಿ ಕೊಂಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳನ್ನೇ ಅಸ್ತ್ರವನ್ನಾಗಿ ಇಟ್ಟುಕೊಂಡಿರುವ ಕೆಲ ವಿಕೃತ ಮನಸ್ಸುಗಳು ಅವರಿಬ್ಬರ ನಡುವಣ ಬಾಂಧವ್ಯಕ್ಕೆ ಹುಳಿ ಹಿಂಡಲು ಪ್ರಯತ್ನಿಸುತ್ತಿವೆ.  ಅನುಷ್ಕಾ ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಬಂದದ್ದಕ್ಕೂ ಕೊಹ್ಲಿ ಮೊದಲ ಎಸೆತದಲ್ಲಿಯೇ ಔಟಾಗುವುದಕ್ಕೂ ಏನು ಸಂಬಂಧ. ಇದಕ್ಕೆ ಕೆಲವರು ಅನುಷ್ಕಾ ಮೇಲೆ ಗೂಬೆ ಕೂರಿಸಿದ್ದಾರೆ.  ಅಂತಹವರ ಬದುಕಿನಲ್ಲಿ ಪ್ರೀತಿಗೆ ಜಾಗವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದು ಗವಾಸ್ಕರ್ ಕಿಡಿಕಾರಿದ್ದಾರೆ.

ಒಟ್ಟಾರೆ ಅತ್ತ ನಟಿ ಅನುಷ್ಕಾ ಮತ್ತು ಕೊಹ್ಲಿ ಸ್ನೇಹ ಸಂಬಂಧಕ್ಕೆ ಇದೀಗ ಹೊಸ ತಿರುವು ಲಭಿಸಿದ್ದು, ಗಾಸಿಪ್ ಪ್ರಿಯರಿಗೆ ಮಾತ್ರ ಇದು ಮತ್ತೆ ಸುಗ್ಗಿಕಾಲ ಎಂಬಂತಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

SCO summit: ಟ್ರಂಪ್ ಗೆ ಸೆಡ್ಡು, ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

ಮಂಗಳೂರು: ಆಟೋಗೆ KSRTC ಬಸ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು - Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆ- EY ವರದಿ

ಚಿತ್ರದುರ್ಗ ಶಾಸಕ ವಿರೇಂದ್ರ ಪಪ್ಪಿ ಮತ್ತೆ ಆರು ದಿನ ED ವಶಕ್ಕೆ

Ganesh Chaturthi ಎಫೆಕ್ಟ್; ಚಿನ್ನದ ಬೆಲೆ ಮತ್ತೆ ಏರಿಕೆ; ಇಂದಿನ ದರ ಪಟ್ಟಿ ಇಂತಿದೆ!

SCROLL FOR NEXT