ಬಾಂಗ್ಲಾ ಕ್ರಿಕೆಟಿಗ ಮುಶ್ಫಿಕರ್ ರಹೀಮ್ ಹಾಗೂ ಅವರ ಟ್ವೀಟ್ 
ಕ್ರಿಕೆಟ್

ಬಹಿರಂಗವಾಯ್ತು ಬಾಂಗ್ಲಾ ಆಟಗಾರನ ವಿಕೃತ ಮನಸ್ಸು!

ಟಿ20 ವಿಶ್ವಕಪ್ ನ ಭಾರತದ ವಿರುದ್ಧ ಸೂಪರ್ 10 ಪಂದ್ಯದಲ್ಲಿ ಗೆಲುವಿಗೂ ಮುನ್ನವೇ ಸಂಭ್ರಮಾಚರಣೆ ಮಾಡಿ ಸೋಲಿನ ಬಳಿಕ ಮುಜುಗರಕ್ಕೀಡಾಗಿದ್ದ ಬಾಂಗ್ಲಾದೇಶ ಕ್ರಿಕೆಟಿಗ ಮುಶ್ಫಿಕರ್ ರಹೀಮ್ ಇದೀಗ ತಮ್ಮ ವಿಕೃತ ಮನಸ್ಸಿನ ಅನಾವರಣ ಮಾಡಿದ್ದಾರೆ.

ಢಾಕಾ: ಟೀ20 ವಿಶ್ವಕಪ್ ನ ಭಾರತದ ವಿರುದ್ಧ ಸೂಪರ್ 10 ಪಂದ್ಯದಲ್ಲಿ ಗೆಲುವಿಗೂ ಮುನ್ನವೇ ಸಂಭ್ರಮಾಚರಣೆ ಮಾಡಿ ಸೋಲಿನ ಬಳಿಕ ಮುಜುಗರಕ್ಕೀಡಾಗಿದ್ದ ಬಾಂಗ್ಲಾದೇಶ ಕ್ರಿಕೆಟಿಗ  ಮುಶ್ಫಿಕರ್ ರಹೀಮ್ ಇದೀಗ ತಮ್ಮ ವಿಕೃತ ಮನಸ್ಸಿನ ಅನಾವರಣ ಮಾಡಿದ್ದಾರೆ.

ನಿನ್ನೆ ಮುಂಬೈನಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತವನ್ನು ಸೋಲಿಸುತ್ತಿದ್ದಂತೆಯೇ ಟ್ವೀಟ್ ಮಾಡಿರುವ ರಹೀಮ್ ಭಾರತ ಸೋತಿದ್ದಕ್ಕೆ ತಮಗೆ  ಅತೀವ ಆನಂದವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಭಾರತ ಸೋಲಿನ ಹಿನ್ನಲೆಯಾಗಿಟ್ಟುಕೊಂಡು "ನಿಜವಾದ ಸಂತೋಷ ಇದು....ಸೆಮಿ ಫೈನಲ್ ನಲ್ಲಿ ಭಾರತ ಸೋತಿತು ಎಂದು ಟ್ವೀಟ್  ಮಾಡಿದ್ದಾರೆ.



ಬಾಂಗ್ಲಾ ಕ್ರಿಕೆಟಿಗ ರಹೀಮ್ ರ ಈ ಟ್ವೀಟ್ ಗೆ ಇದೀಗ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಸ್ವತಃ ಕೆಲ ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿಗಳು ರಹೀಮ್ ರ ಟ್ವೀಟ್ ಗೆ ತಮ್ಮ ಆಕ್ರೋಶ  ವ್ಯಕ್ತಪಡಿಸಿದ್ದಾರೆ. ಅತ್ತ ತಮ್ಮ ಟ್ವೀಟ್ ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತ ರಹೀಮ್ ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಟ್ವೀಟ್ ಚಿತ್ರಗಳು  ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿ ರಹೀಮ್ ಮತ್ತೆ ಎರಡನೇ ಬಾರಿಗೆ ಮುಜುಗರಕ್ಕೀಡಾಗುವಂತೆ ಮಾಡಿದೆ.

ಕ್ಷಮೆ ಕೋರಿದ ರಹೀಮ್

ಇನ್ನು ತಮ್ಮ ವಿವಾದಿತ ಟ್ವೀಟ್ ಗೆ ಸಂಬಂಧಿಸಿದಂತೆ ಕ್ರಿಕೆಟ್ ಮುಶ್ಫಿಕರ್ ರಹೀಮ್ ಕ್ಷಮೆ ಕೋರಿದ್ದು, ನಾನು ವೆಸ್ಟ್ ಇಂಡೀಸ್ ತಂಡದ ದೊಡ್ಡ ಬೆಂಬಲಿಗನಾಗಿದ್ದು, ಆ ಹುಮ್ಮಸ್ಸಿನಲ್ಲಿ ಹಾಗೆ  ಬರೆದಿದ್ದೆ. ಆದರೆ ನಾನು ಮಾಡಿದ ಟ್ವೀಟ್ ತಪ್ಪು ಎಂದು ಬಳಿಕ ನನಗೆ ಅರಿವಾಗಿದೆ. ಹೀಗಾಗಿ ಕ್ಷಮೆ ಕೋರುತ್ತಿದ್ದೇನೆ ಎಂದು ತಮ್ಮ ತಪ್ಪಿಗೆ ತೇಪೆ ಹಚ್ಚಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT