ಕಿಂಗ್ಸ್ ಇಲೆವೆನ್ ಪಂಜಾಬ್ 
ಕ್ರಿಕೆಟ್

ಐಪಿಎಲ್ ನಂಬರ್ 1 ತಂಡ ಗುಜರಾತ್ ಮಣಿಸಿದ ಕಿಂಗ್ಸ್ ಇಲೆವೆನ್

ಪ್ರಸ್ತುತ ಐಪಿಎಲ್ ಪಂದ್ಯವಳಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್ ನಂಬರ್ 1 ತಂಡವಾದ ಗುಜರಾತ್ ಲಯನ್ಸ್...

ರಾಜ್ಕೋಟ್: ಪ್ರಸ್ತುತ ಐಪಿಎಲ್ ಪಂದ್ಯವಳಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್ ನಂಬರ್ 1 ತಂಡವಾದ ಗುಜರಾತ್ ಲಯನ್ಸ್ ಅನ್ನು 23 ರನ್ ಗಳಿಂದ ಮಣಿಸಿದೆ.

ಸೌರಾಷ್ಟ್ರ ಕ್ರಿಕೆಟ್ ಅಸೋಶಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇದರೊಂದಿಗೆ ಮೊದಲು ಬ್ಯಾಟ್ ಮಾಡಿದ ಪಂಜಾಬ್ 154 ರನ್ ಗಳಿಗೆ ಆಲೌಟ್ ಆಯಿತು. 155 ರನ್ ಗಳ ಗುರಿ ಬೆನ್ನಟ್ಟಿದ ಗುಜರಾತ್ ಲಯನ್ಸ್ ನಿಗದಿತ ಓವರ್ ನಲ್ಲಿ 131 ರನ್ ಗಳಿಗೆ ಸರ್ವಪತನ ಕಂಡಿತು.

ಗುಜರಾತ್ ಲಯನ್ಸ್ ಸ್ಮಿತ್ 15, ಬ್ರೆಂಡನ್ ಮೆಕ್ಕಲಮ್ 1, ರೈನಾ 18, ಕಾರ್ತಿಕ್ 2, ಜಡೇಜಾ 11, ಬ್ರಾವೋ 0, ಇಶಾಂತ್ ಕಿಶನ್ 27, ಫಾಲ್ಕುನರ್ 32, ಪ್ರವೀಣ್ ಕುಮಾರ್ 15, ಕುಲಕರ್ಣಿ ಅಜೇಯ 6 ಹಾಗೂ ಕೌಶಿಕ್ 0 ರನ್ ಗಳಿಸಿದ್ದಾರೆ.

ಕಿಂಗ್ಸ್ ಪರ ಅಕ್ಷರ್ ಪಟೇಲ್ 4, ಮೋಹಿತ್ ಶರ್ಮಾ 3, ಸಂದೀಪ್ ಶರ್ಮಾ 1 ವಿಕೆಟ್ ಪಡೆದಿದ್ದಾರೆ.

ಕಿಂಗ್ಸ್ ಇಲೆವನ್ ಪರ ಮುರಳಿ ವಿಜಯ್ 55, ಸ್ಟೈನಿಸ್ 27, ಮಾರ್ಷ್ 1, ಮ್ಯಾಕ್ಸ್ ವೆಲ್ 0, ಗುರ್ಕೀರತ್ ಸಿಂಗ್ 0, ಮಿಲ್ಲರ್ 31, ಸಾಹಾ 33, ಅಕ್ಷರ್ ಪಟೇಲ್ 0, ಮೋಹಿತ್ ಶರ್ಮಾ 1, ಕರಿಯಪ್ಪ 1, ಸಂದೀಪ್ ಶರ್ಮಾ ಅಜೇಯ 1 ರನ್ ಗಳಿಸಿದ್ದಾರೆ.

ಗುಜರಾತ್ ಪರ ಕೌಶಿಕ್ 3, ಪ್ರವೀಣ್ ಕುಮಾರ್, ಬ್ರಾವೋ ತಲಾ 2 ವಿಕೆಟ್ ಪಡೆದರೇ, ಕುಲಕರ್ಣಿ ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದಿದ್ದಾರೆ.

ಕಿಂಗ್ಸ್ ಪರ ನಾಲ್ಕು ವಿಕೆಟ್ ಪಡೆದ ಅಕ್ಷರ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ