ಆರ್ಧಶತಕ ಸಿಡಿಸಿದ ಕೊಹ್ಲಿ ಬ್ಯಾಟಿಂಗ್ ವೈಖರಿ (ಕ್ರಿಕ್ ಇನ್ಫೋ ಚಿತ್ರ) 
ಕ್ರಿಕೆಟ್

ಐಪಿಎಲ್-9: ಕೋಲ್ಕತಾಗೆ ಗೆಲ್ಲಲು 186ರನ್ ಗಳ ಟಾರ್ಗೆಟ್ ನೀಡಿದ ಆರ್ ಸಿಬಿ

ಐಪಿಎಲ್ ಸೀಸನ್ 9ನ ಕೋಲ್ಕತಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 185 ರನ್ ಪೇರಿಸಿದ್ದು, ಕೋಲ್ತತಾಗೆ ಗೆಲ್ಲಲು 186 ರನ್ ಗಳ ಟಾರ್ಗೆಟ್ ನೀಡಿದೆ.

ಬೆಂಗಳೂರು: ಐಪಿಎಲ್ ಸೀಸನ್ 9ನ  ಕೋಲ್ಕತಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 185 ರನ್ ಪೇರಿಸಿದ್ದು, ಕೋಲ್ತತಾಗೆ ಗೆಲ್ಲಲು 186 ರನ್ ಗಳ ಟಾರ್ಗೆಟ್ ನೀಡಿದೆ.

ಮೊದಲು ಟಾಸ್ ಗೆದ್ದ ಗಂಭೀರ್ ಪಡೆ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿತು. ಅದರಂತೆ ಬ್ಯಾಟಿಂಗ್ ಗೆ ಇಳಿದ ಕೊಹ್ಲಿ ಪಡೆ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಪೇರಿಸಿದೆ. ಇನ್ನಿಂಗ್ಸ್ ನ 2ನೇ ಓವರ್ ನಲ್ಲೇ ಆರಂಭಿಕ ಆಟಗಾರ ದೈತ್ಯ ಕ್ರಿಸ್ ಗೇಯ್ಲ್ ಔಟ್ ಆದರು. ಆ ಮೂಲಕ ಗೇಯ್ಲ್ ಅವರ ಕಳಪೆ ಫಾರ್ಮ್ ಮುಂದುವರೆಯಿತು. ಆದರೆ ವಿರಾಟ್ ಕೊಹ್ಲಿ ಜೊತೆಗೂಡಿದ ಕೆಎಲ್ ರಾಹುಲ್ ತಂಡಕ್ಕೆ 84 ರನ್ ಗಳ ಅಮೂಲ್ಯ ಜೊತೆಯಾಟವಾಡಿದರು. ಈ ಹಂತದಲ್ಲಿ ರಾಹುಲ್ ಆಕರ್ಷಕ ಅರ್ಧ ಶತಕ ಸಿಡಿಸಿ ಚಾವ್ಲಾ ಬೌಲಿಂಗ್ ನಲ್ಲಿ ಔಟ್ ಆದರೆ, ಕೊಹ್ಲಿ ಕೂಡ 52 ರನ್ ಗಳಿಸಿ ಮಾರ್ಕೆಲ್ ಬೌಲಿಂಗ್ ನಲ್ಲಿ ಔಟ್ ಆದರು.

ಬಳಿಕ ಬಂದ ಡಿವಿಲಿಯರ್ಸ್ ಬಂದಷ್ಟೇ ವೇಗವಾಗಿ ಚಾವ್ಲಾ ಎಲ್ ಬಿ ಬಲೆಗೆ ಬಿದ್ದರೆ, ಅಂತಿಮ ಹಂತದಲ್ಲಿ ಸಿಡಿದು ನಿಂತ ವಾಟ್ಸನ್ ಅಮೂಲ್ಯ 33 ರನ್ ಗಳಿಸಿ ಅಜೇಯರಾಗಿ ಉಳಿದರು.ವಾಟ್ಸನ್ ಗೆ ಉತ್ತಮ ಸಾಥ್ ನೀಡಿದ ಸಚಿನ್ ಬೇಬಿ 16 ರನ್ ಗಳಿಸಿ ಔಟ್ ಆದರೆ, ಸ್ಟುವರ್ಟ್ ಬಿನ್ನಿ 16 ರನ್ ಗಳಿಸಿ ಯಾದವ್ ಬೌಲಿಂಗ್ ನಲ್ಲಿ ಔಟ್ ಆದರು. ಅಂತಿಮವಾಗಿ ಆರ್ ಸಿಬಿ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

NCP ಬಣಗಳ ವಿಲೀನದ ಸುಳಿವು: INDIA ಗೆ ಕೈ ಕೊಟ್ಟು NDA ಸೇರ್ತಾರಾ ಶರದ್ ಪವಾರ್, ಸುಪ್ರಿಯಾ?

ತೇಜೋವಧೆಗೆ ಹುನ್ನಾರ: 'ಸತ್ಯಾಸತ್ಯತೆ' ಹೊರಬರಬೇಕಿದೆ; HD ಕುಮಾರಸ್ವಾಮಿ ಆರೋಪಕ್ಕೆ ಹಾಸನ ಜಿಲ್ಲಾಧಿಕಾರಿ ತಿರುಗೇಟು, Video

ಪಟಾಕಿಗಳು ಕಾಯಿಲೆಗಳನ್ನು ಗುಣಪಡಿಸುತ್ತೆ ಎಂದ ಬಂಗಾಳ ಬಿಜೆಪಿ ಶಾಸಕಿ; ವಿವಾದ ಸೃಷ್ಟಿ!

'ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಆರ್ಥಿಕ ನೆರವು ಕೊಡಬೇಡಿ': ಟ್ರಂಪ್‌ಗೆ ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ ಸಲಹೆ!

ಸಿಎಂ ಶಿವಕುಮಾರ್ ಹಾಸನಾಂಬೆ ದರ್ಶನ ಪಡೆಯುತ್ತಿರುವ ವಿಡಿಯೋಗೆ ಆಕ್ರೋಶಿತ ಭಕ್ತರಿಂದ ಚಪ್ಪಲಿ ಎಸೆತ, Video!