ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಟೂರ್ನಿಯ ಬಳಿಕ ಟೀಂ ಇಂಡಿಯಾ ಕ್ರಿಕೆಟ್ ತಂಡ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿರುವುದನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ದೃಢಪಡಿಸಿದೆ.
ಜಿಂಬಾಬ್ವೆಯ ಹರಾರೆಯಲ್ಲಿ ಎಲ್ಲಾ ಪಂದ್ಯಗಳು ನಡೆಯಲಿವೆ. ಜಿಂಬಾಬ್ವೆ ಪ್ರವಾಸದಲ್ಲಿ ಟೀಂ ಇಂಡಿಯಾ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ.
ಏಕದಿನ ಪಂದ್ಯ ವೇಳಾಪಟ್ಟಿ:
ಜೂನ್ 11ಕ್ಕೆ ಮೊದಲ ಏಕದಿನ
ಜೂನ್ 13ಕ್ಕೆ ಎರಡನೇ ಏಕದಿನ
ಜೂನ್ 15ಕ್ಕೆ ಮೂರನೇ ಏಕದಿನ
ಟಿ20 ಪಂದ್ಯಾವಳಿ ವೇಳಾಪಟ್ಟಿ:
ಜೂನ್ 18ಕ್ಕೆ ಮೊದಲ ಟಿ20
ಜೂನ್ 20ಕ್ಕೆ ಎರಡನೇ ಟಿ20
ಜೂನ್ 22ಕ್ಕೆ ಮೂರನೇ ಟಿ30