ವಿರಾಟ್ ಕೊಹ್ಲಿ 
ಕ್ರಿಕೆಟ್

ಆರ್ಸಿಬಿ ನಾಯಕ ಕೊಹ್ಲಿಗೆ ಏಕೆ ನಿಷೇಧದ ಭೀತಿ?

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ 9ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳಪೆ ಬೌಲಿಂಗ್ ನಿಂದಾಗಿ ಹಲವು ಪಂದ್ಯಗಳನ್ನು ಸೋತಿದೆ...

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ 9ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳಪೆ ಬೌಲಿಂಗ್ ನಿಂದಾಗಿ ಹಲವು ಪಂದ್ಯಗಳನ್ನು ಸೋತಿದ್ದು, ನಾಯಕ ವಿರಾಟ್ ಕೊಹ್ಲಿಗೆ ಬೌಲಿಂಗ್ ನಿರ್ವಹಣೆ ಸಾಕಾಗಿ ಹೋಗಿದೆ.

ಈ ಮಧ್ಯೆ ನಿಧಾನಗತಿ ಬೌಲಿಂಗ್ ನಿಂದಾಗಿ ನಾಯಕ ವಿರಾಟ್ ಕೊಹ್ಲಿ ಟೂರ್ನಿಯ ಒಂದು ಪಂದ್ಯ ನಿಷೇಧಕ್ಕೊಳಗಾಗುವ ಭೀತಿಯಲ್ಲಿದ್ದಾರೆ.

ಟೂರ್ನಿಯಲ್ಲಿ ಸದ್ಯ ಆಡಿರುವ 7 ಪ೦ದ್ಯಗಳ ಪೈಕಿ ನಿಧಾನಗತಿ ಬೌಲಿಂಗ್ ನಿಂದಾಗಿ ಕೊಹ್ಲಿ ಈಗಾಗಲೇ 2 ಬಾರಿ ಒಟ್ಟು 36 ಲಕ್ಷ ರೂ. ದ೦ಡ ತೆತ್ತಿದ್ದಾರೆ. ಇದೀಗ ಮತ್ತೊಮ್ಮೆ ಈ ತಪ್ಪು ಪುನರಾವತ೯ನೆಯಾದರೆ, ಲೀಗ್‍ನಲ್ಲಿ ಮತ್ತೆ 30 ಲಕ್ಷ ರು. ದ೦ಡ ಮತ್ತು 1 ಪ೦ದ್ಯ ನಿಷೇಧಕ್ಕೊಳಗಾಗಲಿದ್ದಾರೆ.

ಐಪಿಎಲ್ ನಲ್ಲಿ ಆರ್ಸಿಬಿ ಫ್ಲೇ ಆಫ್ ಗೆ ಲಗ್ಗೆ ಹಿಡಬೇಕಾದರೆ ಮುಂದಿನ ಪ್ರತಿ ಪಂದ್ಯದಲ್ಲೂ ಜಯ ಗಳಿಸುವುದು ಅನಿವಾರ್ಯ. ಸದ್ಯ ಬ್ಯಾಟಿಂಗ್ ಒಂದನ್ನೆ ನಂಬಿಕೊಂಡಿರುವ ಆರ್ಸಿಬಿಗೆ ಭರ್ಜರಿ ಬ್ಯಾಟಿಂಗ್ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಅಗತ್ಯ. ಅಂತಹ ವಿರಾಟ್ ನಿಷೇಧಕ್ಕೊಳಗಾದರೆ ಇದರಿ೦ದ ಆರ್‍ಸಿಬಿ ತ೦ಡಕ್ಕೂ ಹೊಡೆತ ಬೀಳುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!