ವಿರಾಟ್ ಕೊಹ್ಲಿ -ಆ್ಯಡಂ ಝಂಪಾ
ಬೆಂಗಳೂರು: ಕೆಲವು ದಿನಗಳ ಹಿಂದೆಯಷ್ಟೇ ಆಸ್ಟ್ರೇಲಿಯಾದ ಸ್ಪಿನ್ನರ್ ಈಗ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಪರವಾಗಿ ಐಪಿಎಲ್‌ನಲ್ಲಿ ಆಡುತ್ತಿರುವ ಆ್ಯಡಂ ಝಂಪಾ, ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಯಾರು? ಎಂದು ಪ್ರಶ್ನಿಸಿದ್ದರು.
ಶನಿವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಝಂಪಾ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದು, ಈ ಪಂದ್ಯದಲ್ಲಿ ಸೆಂಚುರಿ ಬಾರಿಸಿ ಆರ್‌ಸಿಬಿಯನ್ನು ಗೆಲ್ಲಿಸುವ ಮೂಲಕ ಕೊಹ್ಲಿ ಝಂಪಾ ಪ್ರಶ್ನೆಗೆ ಉತ್ತರಿಸಿದ್ದಾರೆ.
ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿ 7 ವಿಕೆಟ್‌ಗಳ ಗೆಲವು ಸಾಧಿಸಿತ್ತು. ಆರ್‌ಸಿಬಿ ನಾಯಕ ಕೊಹ್ಲಿ ಅಜೇಯ 108 ರನ್ ಗಳಿಸುವ ಮೂಲಕ ಆರ್‌ಸಿಬಿಯ ಗೆಲುವಿಗೆ ಕಾರಣರಾಗಿದ್ದರು.
ಮ್ಯಾಚ್ ಮುಗಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಝಂಪಾ, ಕೊಹ್ಲಿ ರನ್ ಮೆಷೀನ್‌ನಂತೆ ಆಟವಾಡುತ್ತಿದ್ದಾರೆ. ಅವರು ಇನ್ನಿಂಗ್ಸ್‌ನಲ್ಲಿ ಫರ್‌ಫೆಕ್ಷನ್ ಟೈಮಿಂಗ್ಸ್ ಹೊಂದಿದ್ದಾರೆ ಎಂದು ಕೊಹ್ಲಿ ಗುಣಗಾನ ಮಾಡಿದ್ದಾರೆ.
ಆರಂಭಿಕ ಬ್ಯಾಟಿಂಗ್‌ನಲ್ಲಿ ಕೊಹ್ಲಿ ಎಸೆತಗಳನ್ನು ರನ್ ಆಗಿ ಪರಿವರ್ತಿಸಲು ನೋಡಲ್ಲ. ಆಮೇಲಾಮೇಲೆ ಅವರು ಎಲ್ಲ ಎಸೆತಗಳನ್ನು ರನ್‌ಗಳನ್ನಾಗಿ ಪರಿವರ್ತಿಸುತ್ತಾರೆ. ಅವರು ಬಾಲ್‌ನ್ನು ಎದುರಿಸುವಾಗ ಟೈಮಿಂಗ್ಸ್ ಕೊಡುತ್ತಾರೆ. ಅವರು ಬಾಲ್‌ನ್ನು 360 ಡಿಗ್ರಿಯಲ್ಲಿ ಮೈದಾನದ ಸುತ್ತಲೂ ಅಟ್ಟುತ್ತಾರೆ. ಹೀಗಿರುವಾಗ ಅವರಿಗೆ ಬೌಲಿಂಗ್ ಮಾಡುವುದು ಕಷ್ಟ ಎಂದು ಝಂಪಾ ಹೇಳಿದ್ದಾರೆ.