ಅನಿಲ್ ಕುಂಬ್ಳೆ- ರಾಹುಲ್ ದ್ರಾವಿಡ್ 
ಕ್ರಿಕೆಟ್

ಐಸಿಸಿ ಕ್ರಿಕೆಟ್ ಸಮಿತಿ ಅಧ್ಯಕ್ಷರಾಗಿ ಕುಂಬ್ಳೆ ಮುಂದುವರಿಕೆ, ದ್ರಾವಿಡ್‌ಗೆ ಸದಸ್ಯತ್ವ

ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆಯವರನ್ನು ಎರಡನೇ ಬಾರಿ ಐಸಿಸಿ ಕ್ರಿಕೆಟ್ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಅದೇ ವೇಳೆ ರಾಹುಲ್...

ದುಬೈ: ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆಯವರನ್ನು ಎರಡನೇ ಬಾರಿ ಐಸಿಸಿ ಕ್ರಿಕೆಟ್ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಅದೇ ವೇಳೆ ರಾಹುಲ್ ದ್ರಾವಿಡ್ ಅವರನ್ನು ಸಮಿತಿಯ ಪ್ರಮುಖ ತಂಡದ ಸದಸ್ಯರನ್ನಾಗಿ ಮಾಡಲಾಗಿದೆ. 
ಭಾರತದ ಕ್ರಿಕೆಟ್ ತಂಡದಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿರುವ ಕುಂಬ್ಳೆ ಅವರನ್ನು 2012ರಲ್ಲಿ ಐಸಿಸಿ ಕ್ರಿಕೆಟ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಇದೀಗ ಎರಡನೇ ಬಾರಿಯೂ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವಂತೆ ಸಮಿತಿ ತೀರ್ಮಾನ ಕೈಗೊಂಡಿದ್ದು, 2018ರ ವರೆಗೆ ಕುಂಬ್ಳೆ ಪ್ರಸ್ತುತ ಪದವಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. 
ಏತನ್ಮಧ್ಯೆ, ಐಸಿಸಿ ಕ್ರಿಕೆಟ್ ಕಮಿಟಿ ಸದಸ್ಯರಾಗಿ ಮಾಜಿ ಕ್ರಿಕೆಟಿರ ರಾಹುಲ್ ದ್ರಾವಿಡ್ ಮತ್ತು ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರನ್ನು ನೇಮಕ ಮಾಡಲಾಗಿದೆ.
ದ್ರಾವಿಡ್ ಮತ್ತು ಜಯವರ್ಧನೆ 1996 ರಿಂದ 2015ರ ಅವಧಿಯಲ್ಲಿ 1, 161 ಅಂತಾರಾಷ್ಟ್ರೀಯ ಮ್ಯಾಚ್‌ಗಳನ್ನಾಡಿದ್ದಾರೆ. ಈ ಸದಸ್ಯರ ಸದಸ್ಯತ್ವದ ಕಾಲಾವಧಿಯೂ ಮೂರು ವರ್ಷವಾಗಿದೆ.
ಮೇ 31 ಮತ್ತು ಜೂನ್ 1 ರಂದು ಇಡಿನ್‌ಬರ್ಗ್, ಸ್ಕಾಟ್‌ಲ್ಯಾಂಡ್‌ನಲ್ಲಿ ಐಸಿಸಿ ವಾರ್ಷಿಕ ಸಮ್ಮೇಳನ ನಡೆಯಲಿದೆ ಎಂದು ಐಸಿಸಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; CEC ರಾಜೀನಾಮೆಗೆ ಬಿಗಿಪಟ್ಟು..!

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ