ಗುಜರಾತ್ ಲಯನ್ಸ್ 
ಕ್ರಿಕೆಟ್

ರೈನಾ ಅಬ್ಬರದ ಬ್ಯಾಟಿಂಗ್: ಪ್ಲೇ ಆಫ್ ಗೆ ಗುಜರಾತ್ ಲಯನ್ಸ್

ಐಪಿಎಲ್ 9ನೇ ಆವೃತ್ತಿಯ ಪ್ಲೇ ಆಫ್ ಗೇರಲು ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಶುರುವಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್...

ಐಪಿಎಲ್ 9ನೇ ಆವೃತ್ತಿಯ ಪ್ಲೇ ಆಫ್ ಗೇರಲು ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಶುರುವಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ನಡುವಿನ ಪಂದ್ಯದಲ್ಲಿ ಕೋಲ್ಕತ್ತಾ ತಂಡವನ್ನು ಮಣಿಸಿ ಗುಜರಾತ್ ಪ್ಲೇ ಆಫ್  ಗೆ ಎಂಟ್ರಿ ನೀಡಿದೆ.

ಕಾನ್ಪುರ್ ಗ್ರೀನ್ ಪಾರ್ಕ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತಂಡ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತು. ಸಾಧಾರಣ ಮೊತ್ತ ಬೆನ್ನಟ್ಟಿದ ಗುಜರಾತ್ ಗೆ ನಾಯಕ ಸುರೇಶ್ ರೈನಾರ ಅಬ್ಬರದ ಬ್ಯಾಟಿಂಗ್ ನಿಂದಾಗಿ 13.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿ ಜಯದ ನಗೆ ಬೀರಿತು.

ಗುಜರಾತ್ ಪರ ಸ್ಮಿತ್ 0, ಬ್ರೆಂಡಮ್ ಮೆಕ್ಕಲಂ 6, ಸುರೇಶ್ ರೈನಾ ಅಜೇಯ 53, ಕಾರ್ತಿಕ್ 12, ಫಿಂಚ್ 26, ಜಡೇಜಾ ಅಜೇಯ 11 ರನ್ ಗಳಿಸಿದ್ದಾರೆ.

ಕೋಲ್ಕತ್ತಾ ಪರ ರಾಜ್ಪೂತ್, ನರೈನ್ ಹಾಗೂ ಮಾರ್ಕೆಲ್ ತಲಾ 1 ವಿಕೆಟ್ ಪಡೆದಿದ್ದಾರೆ.

ಕೋಲ್ಕತ್ತಾ ಪರ ರಾಬಿನ್ ಉತ್ತಪ್ಪ 25, ಗೌತಮ್ ಗಂಭೀರ್ 8, ಮನೀಷ್ ಪಾಂಡ್ಯೆ 1, ಚಾವ್ಲಾ 11, ಯುಸೂಫ್ ಪಠಾಣ್ 36, ಶಕೀಬ್ ಅಲ್ ಹಸನ್ 3, ಯಾದವ್ 17, ಹೊಲ್ಡೆರ್ 13 ರನ್ ಗಳಿಸಿದ್ದಾರೆ.

ಗುಜರಾತ್ ಪರ ಸ್ಮಿತ್ 4, ಕುಲಕರ್ಣಿ, ಬ್ರಾವೋ ತಲಾ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?