ರಾಯ್‌ಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ನಿಂದಾಗಿ ಡೆಲ್ಲಿ ಡೇರ್ ಡೇವಿಲ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಆರ್ಸಿಬಿ ಪ್ಲೇ ಆಫ್ ಗೆ ಎಂಟ್ರಿ ನೀಡಿದೆ.
ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಡೇರ್ ಡೇವಿಲ್ಸ್ ತಂಡ ನಿಗಿದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿತು. ಸಾಧಾರಣ ಮೊತ್ತ ಬೆನ್ನಟ್ಟಿದ ಆರ್ಸಿಬಿ ತಂಡದ ಪರ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟ್ ಮಾಡಿ 18ನೇ ಓವರ್ ನಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಆರ್ಸಿಬಿ ಪರ ಕ್ರಿಸ್ ಗೇಯ್ಲ್ 1, ವಿರಾಟ್ ಕೊಹ್ಲಿ ಅಜೇಯ 54, ಎಬಿಡಿ ವಿಲಿಯರ್ಸ್ 6, ಕೆಎಲ್ ರಾಹುಲ್ 38, ಶೇನ್ ವಾಟ್ಸನ್ 14 ಹಾಗೂ ಸ್ಟುವರ್ಟ್ ಬಿನ್ನಿ ಅಜೇಯ 16 ರನ್ ಗಳಿಸಿದ್ದಾರೆ.
ಡೆಲ್ಲಿ ಪರ ಜಹೀರ್, ಮೋರಿಸ್, ನೇಗಿ ಬ್ರಾಥ್ವೈಟ್ ತಲಾ 1 ವಿಕೆಟ್ ಪಡೆದಿದ್ದಾರೆ.
ಡೆಲ್ಲಿ ಪರ ಡಿ ಕುಕ್ 60, ಪಾಂಟ್ 1, ನಾಯರ್ 11, ಸ್ಯಾಮ್ಸನ್ 17, ಬಿಲ್ಲಿಂಗ್ಸ್ 4, ನೇಗಿ 6, ಬ್ರಾಥ್ವೈಟ್ 1 ಮೋರಿಸ್ ಅಜೇಯ 27 ರನ್ ಗಳಿಸಿದ್ದಾರೆ.
ಆರ್ಸಿಬಿ ಪರ ಚಹಾಲ್ 3, ಕ್ರಿಸ್ ಗೇಯ್ಲ್ 2, ಅರವಿಂದ್ ಹಾಗೂ ಜೋರ್ಡನ್ ತಲಾ 1 ವಿಕೆಟ್ ಪಡೆದಿದ್ದಾರೆ.