ಬೆಂಗಳೂರು: ಮಂಗಳವಾರ ಗುಜರಾತ್ ಲಯನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಗೆದ್ದು ಫೈನಲ್‌ಗೆ ತಲುಪಿರುವ ಆರ್‌ಸಿಬಿ ತಂಡಕ್ಕೆ ಮದ್ಯ ದೊರೆ ವಿಜಯ್ ಮಲ್ಯ ಶುಭಾಶಯ ಹೇಳಿದ್ದಾರೆ.
ಪಂದ್ಯ ಗೆಲ್ಲಿಸಿಕೊಟ್ಟ ಆರ್‌ಸಿಬಿ ದಾಂಡಿಗ ಎಬಿ ಡಿವಿಲಿಯರ್ಸ್‌ಗೆ ಲಂಡನ್‌ನ ಅಡಗುತಾಣದಿಂದಲೇ ಮಲ್ಯ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.
ಎ, ಬಿ, ಪ್ಲಾನ್ ವಿಫಲವಾಯಿತು. ಆದರೆ ಎಬಿ ಪ್ಲಾನ್ ಗೆದ್ದು ಬಿಟ್ಟಿತು. ಆರ್ ಸಿ ಬಿಗೆ ಅಭಿನಂದನೆಗಳು ಎಂದು ಹೇಳಿ ಮಲ್ಯ ಟ್ವೀಟಿಸಿದ್ದಾರೆ.