ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನಲ್ಲಿ ಹಲವು ದಾಖಲೆಗಳನ್ನು ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಟೂರ್ನಿಯೊಂದರಲ್ಲಿ 1000 ರನ್ ಪೂರೈಸಿ ಮತ್ತೊಂದು ಹೊಸ ದಾಖಲೆ ಮಾಡುತ್ತಾರೆ ಕಾದು ನೋಡಬೇಕಿದೆ.
ಐಪಿಎಲ್ 9ನೇ ಆವೃತ್ತಿಯಲ್ಲಿ ನಾಲ್ಕು ಶತಕಗಳನ್ನು ಸಿಡಿಸಿ ಅಗ್ರಮಾನ್ಯ ಆಟಗಾರನಾಗಿರುವ ವಿರಾಟ್ ಆಡಿರುವ 15 ಪಂದ್ಯಗಳ ಪೈಕಿ 919 ರನ್ ಗಳಿಸಿದ್ದಾರೆ. 1000 ಗಡಿ ದಾಟಲು ಇನ್ನು 81 ರನ್ ಗಳ ಅವಶ್ಯಕತೆ ಇದ್ದು ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಹೊಡೆಯಬೇಕಿದೆ.
ಐಪಿಎಲ್ ಟೂರ್ನಿಗಳಲ್ಲಿ 800 ರನ್ ಗಳಿಗಿಂತಲೂ ಹೆಚ್ಚು ರನ್ ಗಳಿಸಿರುವ ಏಕೈಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಈ ಮತ್ತೊಂದು ದಾಖಲೆಯ ಅಂಚಿನಲ್ಲಿದ್ದಾರೆ.