ಕ್ರಿಕೆಟ್

ಈಡನ್ ಗಾರ್ಡನ್ಸ್‌ ನ ಪಿಚ್ ಕ್ಯುರೇಟರ್ ಪ್ರಭೀರ್ ಮುಖರ್ಜಿ ನಿಧನ

Srinivas Rao BV

ಕೋಲ್ಕತಾ: ಈಡನ್‌ ಗಾರ್ಡನ್ಸ್‌ ನ ಪಿಚ್ ಕ್ಯುರೇಟರ್ ಪ್ರಭೀರ್ ಮುಖರ್ಜಿ (86) ಜೂ.1 ರಂದು ಕೋಲ್ಕತಾದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಮೂಲತಃ ವೇಗದ ಬೌಲರ್ ಹಾಗೂ ಫುಟ್ ಬಾಲ್ ಗೋಲ್ ಕೀಪರ್ ಆಗಿದ್ದ ಪ್ರಭೀರ್ ಮುಖರ್ಜಿ ಅಪಘಾತಕ್ಕೀಡಾದ ಪರಿಣಾಮ ಸಕ್ರಿಯ ಕ್ರಿಕೆಟ್ ನಿಂದ ದೂರವಾಗಬೇಕಾಯಿತು. ಅಪಘಾತವಾದ ನಾಲ್ಕು ವರ್ಷಗಳ ನಂತರ ಅಂದರೆ 1951 -52 ರಿಂದ ಕ್ರಿಕೆಟ್ ಆಡಳಿತ ಹಾಗೂ ಪಿಚ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಪ್ರಭೀರ್ ಮುಖರ್ಜಿ 2015 ರ ಅಕ್ಟೋಬರ್ ನ ಲ್ಲಿ ನಡೆದ ಐಪಿಎಲ್ ವಿಶ್ವಕಪ್ ವರೆಗೂ ಪಿಚ್ ಕ್ಯುರೇಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
1964 ರಲ್ಲಿ ಬಂಗಾಳ ರಾಷ್ಟ್ರೀಯ  ರೈಲ್ವೆ ಕ್ಲಬ್ ನ ಕಾರ್ಯದರ್ಶಿಯಾದ ನಂತರ ಪ್ರಭೀರ್ ಮುಖರ್ಜಿ ಈಡನ್ ಗಾರ್ಡನ್ಸ್ ನಲ್ಲಿ ಪ್ರಥಮ ಬಾರಿಗೆ ಪಿಚ್ ಕ್ಯುರೇಟರ್ ಆಗಿ ಕಾರ್ಯನಿರ್ವಹಿಸಿದ್ದರು. ಇದರೊಂದಿಗೆ 1979 -80 ರಲ್ಲಿ ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ಗೆ ಸೇರಿದ ಬಳಿಕ ಬಂಗಾಳ ಹಾಗೂ ಈಸ್ಟ್ ಜೋನ್ ತಂಡಗಳನ್ನು ನಿರ್ವಹಿಸಿದ್ದರು.  
1984 ರಲ್ಲಿ ವಿಶ್ವಕಪ್ ಫೈನಲ್ಸ್ ನಲ್ಲಿಯೂ ಸಹ ಪ್ರಭೀರ್ ಮುಖರ್ಜಿ ಪಿಚ್ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  ಪ್ರಭೀರ್ ಮುಖರ್ಜಿ ತಮ್ಮ ಸಿದ್ಧಾಂತಗಳಿಂದಲೇ ಗುರುತಿಸಿಕೊಂಡಿದ್ದರು.  2012 ರಲ್ಲಿ ಇಂಗ್ಲೆಂಡ್- ಭಾರತ ನಡುವಿನ ಟೆಸ್ಟ್ ಸರಣಿಯ ಪಿಚ್ ತಯಾರಿಕೆ ವೇಳೆ ಸ್ವೇರ್ ಟರ್ನರ್ ಗಾಗಿ ಭಾರತ ತಂಡದ ನಾಯಕ ಧೋನಿ ಮುಂದಿಟ್ಟ ಬೇಡಿಕೆಯನ್ನು ಸ್ಪಟವಾಗಿ ನಿರಾಕರಿಸಿದ್ದರು. 1998 ರಲ್ಲಿ ಢಾಕಾದಲ್ಲಿ ನಡೆದ ಐಸಿಸಿ ನಾಕೌಟ್ ಟ್ರೋಫಿಯಲ್ಲೂ ಪಿಚ್ ಮೇಲ್ವಿಚಾರಣೆ ನಡೆಸಿದ್ದ ಪ್ರಭೀರ್ ಮುಖರ್ಜಿ, ಕೊನೆಯದಾಗಿ 2015 ರ ಅಕ್ಟೋಬರ್ ನ ಲ್ಲಿ ನಡೆದ ಐಪಿಎಲ್ ವಿಶ್ವಕಪ್ ಪಂದ್ಯದಲ್ಲಿ ಕ್ಯುರೆಟರ್ ಆಗಿ ಕಾರ್ಯನಿರ್ವಹಿಸಿದ್ದರು.

SCROLL FOR NEXT