ಕ್ರಿಕೆಟ್

ರೋಹಿತ್ ಗೆ ಲಂಡನ್ನಿನಲ್ಲಿ ಯಶಸ್ವಿ ಮಂಡಿ ಶಸ್ತ್ರಚಿಕೆತ್ಸೆ: ಬಿಸಿಸಿಐ

Guruprasad Narayana
ನವದೆಹಲಿ: ಭಾರತದ ಖ್ಯಾತ ಬ್ಯಾಟ್ಸ್ ಮ್ಯಾನ್ ರೋಹಿತ್ ಶರ್ಮ ಲಂಡನ್ನಿನಲ್ಲಿ ಯಶಸ್ವಿ ಬಲಕಾಲಿನ ಮಂಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಹೇಳಿದೆ.
ಕಳೆದ ತಿಂಗಳು ವಿಶಾಖಪಟ್ಟಣಂನಲ್ಲಿ ಜರುಗುತ್ತಿದ್ದ ನ್ಯೂಜಿಲ್ಯಾಂಡ್ ವಿರುದ್ಧದ ಒಂದು ದಿನದ ಕ್ರಿಕೆಟ್ ಪಂದ್ಯದಲ್ಲಿ ರೋಹಿತ್ ಅವರ ಬಲಕಾಲಿನ ತೊಡೆಗೆ ಗಾಯವಾಗಿತ್ತು. ಅವರನ್ನು ಈಗ ಭಾನುವಾರ ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಿದ್ದಾರೆ ಎನ್ನಲಾಗಿದೆ. 
"ಶುಕ್ರವಾರ ಲಂಡನ್ನಿನಲ್ಲಿ ರೋಹಿತ್ ಶರ್ಮ ಯಶಸ್ವಿ ಮಂಡಿ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎಂದು ಬಿಸಿಸಿಐ ವೈದ್ಯಕೀಯ ತಂಡ ಧೃಢೀಕರಿಸುತ್ತದೆ" ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ. 
"ಈ ಚಿಕಿತ್ಸೆ ಯಶಸ್ವಿಯಾಗಿತ್ತು ಮತ್ತು ರೋಹಿತ್ ಅವರನ್ನು ಮುಂದಿನ ೨೪ ಘಂಟೆಗಳಲ್ಲಿ ದಿಸ್ಚಾರ್ಜ್ ಮಾಡಲಾಗುತ್ತದೆ.
"ಬಿಸಿಸಿಐ ವೈದ್ಯಕೀಯ ತಂಡ ನಿರಂತರವಾಗಿ ಅವರ ಚಿಕೆತ್ಸೆಯನ್ನು ಪರಿಶೀಲಿಸುತ್ತಿದ್ದು, ಅವರು ಸಹಜ ಸ್ಥಿತಿಯತ್ತ ಮರಳಲು ಸಹಕರಿಸಲಿದೆ" ಎಂದು ಹೇಳಿಕೆ ತಿಳಿಸಿದೆ. 
ಈ ಗಾಯದಿಂದ ಅವರನ್ನು ಸದ್ಯಕ್ಕೆ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿರಲಾಗಲಿಲ್ಲ. ಜನವರಿ ೧೫ ರಿಂದ ಪ್ರಾರಂಭವಾಗಲಿರುವ ಒಂದು ದಿನದ ಮತ್ತು ಟಿ೨೦ ಪಂದ್ಯಗಳಿಗೂ ಆಯ್ಕೆಯಾಗುವ ಸಾಧ್ಯತೆ ಕಡಿಮೆಯಿದೆ.  
SCROLL FOR NEXT